ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀರಾವರಿಗೆ ನೀರು ಕುಡಿಸಿದ ಗುತ್ತಿಗೆದಾರರ ಎದೆ ಢವ ಢವ

2015 ರಿಂದ 2019ರ ಅವಧಿಯಲ್ಲಿ ನೀರಾವರಿ ಇಲಾಖೆ ಯೋಜನೆಗಳಲ್ಲಿ ಭಾರೀ ಅಕ್ರಮಗಳು ನಡೆದಿರುವುದರ ಬಗ್ಗೆ ಸುಳಿವು ಸಿಕ್ಕಿದೆ. ಈ ಬಗ್ಗೆ ತನಿಖೆ ನಡೆಸಲು ಯಡಿಯೂರಪ್ಪ ಸರ್ಕಾರ ನಿರ್ಧರಿಸಿದೆ.

ಸಾವಿರಾರು ಕೋಟಿ ಕಾಮಗಾರಿಯಲ್ಲಿ ನೂರಾರು ಕೋಟಿ ನುಂಗಿದ್ದ ನಾಲ್ಕೂ ನಿಗಮಗಳ ಅಧಿಕಾರಿಗಳು, ಕಾಂಟ್ರಾಕ್ಟರ್​​​ಗಳ ಎದೆಯಲ್ಲಿ ಢವಢವ ಶುರುವಾಗಿದೆ.ದ 2019ರವರೆಗೆ ನಾಲ್ಕೂ ನೀರಾವರಿ ನಿಗಮಗಳ ಅಡಿಯಲ್ಲಿ ನಡೆದಿದ್ದ 17,685 ಕೋಟಿ ಕಾಮಗಾರಿಯ ತನಿಖಾ ವರದಿ ನೀಡಲು ಸತ್ಯ ಶೋಧನಾ ಸಮಿತಿ ರಚನೆ ಮಾಡಲಾಗಿದೆ. ಇಲಾಖೆಯ ನಿವೃತ್ತ ಕಾರ್ಯದರ್ಶಿ ಎಸ್‌.ಜೆ. ಚನ್ನಬಸಪ್ಪ, ಸಿಎಂ ತಾಂತ್ರಿಕ ಸಲಹೆಗಾರ ಎಂ.ಕೆ. ವೆಂಕಟರಾಂ ನೇತೃತ್ವದ ಸಮಿತಿ ತನಿಖೆ ನಡೆಸಿ ವರದಿ ಕೊಡಲಿದೆ.

ಕರ್ನಾಟಕ ನೀರಾವರಿ ನಿಗಮ (KNNL),ಕಾವೇರಿ ನೀರಾವರಿ ನಿಗಮ (CNNL‌), ಕೃಷ್ಣಾ ಭಾಗ್ಯ ನಿಗಮ(KBJNL), ವಿಶ್ವೇಶ್ವರಯ್ಯ ಜಲ ನಿಗಮ (VJNL‌)ನಲ್ಲಿ ಸಾವಿರಾರು ಕೋಟಿ ಮೊತ್ತದ ಕಾಮಗಾರಿ ನಡೆದಿದೆ. ಡಿ.ವೈ.ಉಪ್ಪಾರ್‌ ಸಹಭಾಗಿತ್ವದಲ್ಲಿ ನಡೆದಿದ್ದ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳು ಇದರಲ್ಲಿ ಸೇರಿವೆ. ಕಾಮಗಾರಿಗಳ ಟೆಂಡರ್‌ ಮೊತ್ತ ಹೆಚ್ಚಿಸಿ, ನಕಲಿ ದರ ಪಟ್ಟಿ, ಬೋಗಸ್‌ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಕೋಟಿ ಕೋಟಿ ಲಾಸ್ ಮಾಡಲಾಗಿತ್ತು.

Edited By : Nagaraj Tulugeri
PublicNext

PublicNext

17/12/2020 04:52 pm

Cinque Terre

118.58 K

Cinque Terre

6

ಸಂಬಂಧಿತ ಸುದ್ದಿ