ಬೀದರ್: ಕೇಂದ್ರ ರಸಗೊಬ್ಬರ ಸಚಿವ ಭಗವಂತ ಖುಭಾ ಅವರ ತವರು ಕ್ಷೇತ್ರದಲ್ಲಿ ದುಬಾರಿ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಗಾಂಧಿ ಗಂಜ್ ನ ಆರು ಫರ್ಟಿಲೈಸರ್ ಅಂಗಡಿಗಳ ಮೇಲೆ ಜಂಟಿ ಕೃಷಿ ನಿರ್ದೇಶಕಿ ಹಾಗೂ ಆಹಾರ ಇಲಾಖೆ ಉಪ ನಿರ್ದೆಶಕರು ಜಂಟಿ ದಾಳಿ ನಡೆಸಿದ್ದಾರೆ.
ಅಕ್ರಮವಾಗಿ ಹೆಚ್ಚುವರಿ ದರದಲ್ಲಿ ಯೂರಿಯಾ ಡಿಎಪಿ ಗೊಬ್ಬರ ಮಾರಾಟ ಮಾಡುತ್ತಿದ್ದ ಫರ್ಟಿಲೈಸರ್ ಅಂಗಡಿ ಮಾಲೀಕರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಹಾಗೂ ನಾಗರಿಕ ಆಹಾರ ಸರಬುರಾಜು ಇಲಾಖೆ ಉಪ ನಿರ್ದೇಶಕ ಬಾಬುರೆಡ್ಡಿ ಸೇರಿದಂತೆ ಹಲವು ಅಧಿಕಾರಿಗಳ ತಂಡ ರೈಡ್ ನಲ್ಲಿ ಭಾಗಿಯಾಗಿತ್ತು
ದುಬಾರಿ ಬೆಲೆಯಲ್ಲಿ ರಸಗೊಬ್ಬರ ಮಾರಾಟದ ದೂರುಗಳ ಹಿನ್ನಲೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ದಾಳಿ ಮಾಡಿ ಮುಂದಿನ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ ಹಿನ್ನಲೆಯಲ್ಲಿ ಈ ದಾಳಿ ಮಾಡಲಾಗಿದೆ.
PublicNext
14/11/2021 02:05 pm