ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೂನಿಫಾರ್ಮ್ ನಲ್ಲೇ ಮಲ ವಿಸರ್ಜನೆ : ಬಾಲಕನ ಮೇಲೆ ಬಿಸಿನೀರು ಸುರಿದ ಪಾಪಿ ಶಿಕ್ಷಕ

ರಾಯಚೂರು : ವಿದ್ಯ ಕಲಿಸುವ ಗುರು ದೇವರಿಗೆ ಸಮಾನ ಎನ್ನುತ್ತಾರೆ. ಇಲ್ಲೊಬ್ಬ ಶಿಕ್ಷಕ ಇಡೀ ಶಿಕ್ಷಕ ಕುಲಕ್ಕೆ ಕಳಂಕ ತಂದಿದ್ದಾರೆ. ಹೌದು ಶಾಲಾ ಸಮವಸ್ತ್ರದಲ್ಲೇ ಬಾಲಕ ಮಲ ವಿಸರ್ಜನೆ ಮಾಡಿಕೊಂಡಿದ್ದಕ್ಕೆ ಸಿಟ್ಟಿಗೆದ್ದು 8 ವರ್ಷದ ಬಾಲಕನ ಮೇಲೆ ಬಿಸಿನೀರು (Hot Water) ಸುರಿದು ವಿಕೃತಿ ಮೆರೆದಿರುವ ಘಟನೆ ರಾಯಚೂರಿನ ಮಸ್ಕಿ ತಾಲೂಕಿನಲ್ಲಿ ನಡೆದಿದೆ.

ಮಸ್ಕಿಯ ಸಂತೆಕೆಲ್ಲೂರು ಗ್ರಾಮದಲ್ಲಿ 2ನೇ ತರಗತಿಯ ವಿದ್ಯಾರ್ಥಿ ಅಖಿತ್ (8)ಗೆ ಗಂಭೀರ ಗಾಯಗಳಾಗಿದ್ದು, ಶಿಕ್ಷಕನ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ. ಮಿಟ್ಟಿಕೆಲ್ಲೂರು ಮೂಲದ ಗ್ರಾಮದ ವಿದ್ಯಾರ್ಥಿ ಶಾಲೆಗೆ (School) ಹೋದಾಗ ಶಾಲಾ ಸಮವಸ್ತ್ರದಲ್ಲೇ ವಿದ್ಯಾರ್ಥಿ ಮಲ ವಿಸರ್ಜನೆ ಮಾಡಿಕೊಂಡಿದ್ದಾನೆ. ಇದರಿಂದ ಗರಂ ಆದ ಶಿಕ್ಷಕ ವಿದ್ಯಾರ್ಥಿ ಮೇಲೆ ಬಿಸಿ ನೀರು ಎರಚಿದ್ದು, ಮಗುವಿನ ದೇಹದ ಶೇ.40ರಷ್ಟು ಭಾಗ ಬೆಂದು ಗಂಭೀರ ಗಾಯಗಳಾಗಿವೆ.

ಮಗುವನ್ನು ಲಿಂಗಸುಗೂರು ತಾಲೂಕು ಅಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಸೆಪ್ಟಂಬರ್ 2ರಂದು ಘಟನೆ ನಡೆದಿದೆ. ಘಟನೆ ನಡೆದು ಒಂದು ತಿಂಗಳಾದರೂ ದೂರು ದಾಖಲಿಸಿಕೊಳ್ಳಲು ಮಸ್ಕಿ ಪೊಲೀಸರು (Police) ಹಿಂದೇಟು ಹಾಕಿದ್ದಾರೆ. ಅಲ್ಲದೇ ಮಗುವಿಗೆ ಅನ್ಯಾಯ ನಡೆದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿಲ್ಲ. ಕೂಡಲೇ ಶಿಕ್ಷಕನ ವಿರುದ್ದ ಕಠಿಣ ಕ್ರಮಕ್ಕೆ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Edited By : Nirmala Aralikatti
PublicNext

PublicNext

09/09/2022 04:11 pm

Cinque Terre

143.23 K

Cinque Terre

29

ಸಂಬಂಧಿತ ಸುದ್ದಿ