ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಲೆಯಲ್ಲಿ ಹುಟ್ಟುಹಬ್ಬ : ಅಪ್ಪ ಮಗನ ಜೀವ ತೆಗೆದ ಶಿಕ್ಷಕರು

ಖಮ್ಮಂ (ತೆಲಂಗಾಣ): ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ನೀಡದೆ ಅನಗತ್ಯ ಮಾತಿನಿಂದಾಗಿ ಅಪ್ಪ ಮಗ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ ಹೃದಯವಿದ್ರಾವಕ ಘಟನೆ ತೆಲಂಗಾಣದ ಖಮ್ಮಂನಲ್ಲಿ ನಡೆದಿದೆ.

ಹೌದು ಶಾಲೆಯಲ್ಲಿ ಸಾಯಿ ಭಾನುಪ್ರಕಾಶ್ ಎಂಬ ವಿದ್ಯಾರ್ಥಿ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಕ್ಕೆ ಶಾಲೆಯ ಶಿಕ್ಷಕರು ಭಾನುಪ್ರಕಾಶ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಜೊತೆಗೆ ವಿದ್ಯಾರ್ಥಿ ಜೊತೆ ಆತನ ತಂದೆ ತಂದೆ ಚಲ್ಲಾ ರಾಮ್ ಬಾಬು ಅವರನ್ನೂ ಕರೆಯಿಸಿ ಅವಮಾನ ಮಾಡಿ, ಮನಬಂದಂತೆ ಹೀಯಾಳಿಸಿದ್ದಾರೆ. ಮಾತ್ರವಲ್ಲದೆ ಒಂದು ವಾರದ ಮಟ್ಟಿಗೆ ಭಾನುಪ್ರಕಾಶ್ ನನ್ನು ಶಾಲೆಯಿಂದ ಅಮಾನತು ಮಾಡಿದ್ದಾರೆ.

ಇದರಿಂದ ತೀವ್ರವಾಗಿ ಮನನೊಂದ ಬಾಲಕ ಭಾನುಪ್ರಕಾಶ್, ಮನೆಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಬದುಕಲಿಲ್ಲ. ಅತ್ತ ಆಸ್ಪತ್ರೆಯಲ್ಲಿ ಮಗ ಅಸುನೀಗಿದ ಸುದ್ದು ಕೇಳಿದ ತಂದೆ ದುಃಖ ತಾಳದೇ ನೇಣಿಗೆ ಶರಣಾಗಿದ್ದಾರೆ.

ಶಿಕ್ಷಕರ ತಪ್ಪಿನಿಂದ ಅಮಾಯಕ ಎರಡು ಜೀವಗಳು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿವೆ. ಸದ್ಯ ಈ ಘಟನೆಗೆ ಶಾಲೆಯ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತು ಪ್ರಕರಣದ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By : Nirmala Aralikatti
PublicNext

PublicNext

20/12/2021 09:29 pm

Cinque Terre

78.67 K

Cinque Terre

8

ಸಂಬಂಧಿತ ಸುದ್ದಿ