ಲಖನೌ: ಕ್ರೈಂಗಳೆಂದರೆ ಇತ್ತೀಚೆಗೆ ಸಾಮಾನ್ಯ ಎನ್ನುವಂತಾಗಿದೆ.
ಯಾರು ಕೂಡಾ ಭವಿಷ್ಯದ ಬಗ್ಗೆ ಯೋಚನೆ ಮಾಡದೇ ಆ ಕ್ಷಣಕ್ಕೆ ದುಡುಕಿನ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಹೀಗಾಗಿಯೇ ಕ್ರೈಂ ರೆಟ್ ಗಳು ಹೆಚ್ಚಾಗುತ್ತಿವೆ.
ಸದ್ಯ ಇಲ್ಲೊಬ್ಬ 10 ನೇ ತರಗತಿ ವಿದ್ಯಾರ್ಥಿ ಶಾಲಾ ಕೊಠಡಿಯಲ್ಲಿ ಸೀಟಿನ ವಿಚಾರವಾಗಿ ನಡೆದ ಗಲಾಟೆಯಲ್ಲಿ ಗುಂಡುಹಾರಿಸಿ ತನ್ನ ಸಹಪಾಠಿಯನ್ನೇ ಹತ್ಯೆಗೈದಿದ್ದಾನೆ.
ಇಬ್ಬರು ವಿದ್ಯಾರ್ಥಿಗಳ ನಡುವೆ ನಡೆದ ವಾಗ್ವಾದ ವಿಕೋಪಕ್ಕೆ ಹೋಗಿದ್ದು, ವಿದ್ಯಾರ್ಥಿಯೊಬ್ಬ ಪಿಸ್ತೂಲ್ ಅನ್ನು ತಂದು ಸಹಪಾಠಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ.
ಈ ಘಟನೆ ಬುಲಂದ್ ಶಹರ ಜಿಲ್ಲೆಯ ಶಿಖರ್ ಪುರದ ಶಾಲೆಯಲ್ಲಿ ಸಂಭವಿಸಿದೆ.
ಕುಪಿತಗೊಂಡ ವಿದ್ಯಾರ್ಥಿಯು, ಸೇನೆಯಲ್ಲಿರುವ ತನ್ನ ಸಂಬಂಧಿಯೊಬ್ಬರಿಗೆ ಸೇರಿದ ಲೈಸನ್ಸ್ ವುಳ್ಳ ಪಿಸ್ತೂಲ್ ತಂದು ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಶಾಲೆಯ ಪ್ರಾಚಾರ್ಯರು ಮುಖ್ಯದ್ವಾರವನ್ನು ಬಂದ್ ಮಾಡಿಸಿ, ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
'ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ವಿದ್ಯಾರ್ಥಿ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು' ಎಂದು ಪೊಲೀಸರು ಮಾಹಿತಿ ನೀಡಿದರು.
ಆರೋಪಿ ವಿದ್ಯಾರ್ಥಿಯ ಬಳಿ ಇನ್ನೊಂದು ಕಂಟ್ರಿ ಪಿಸ್ತೂಲ್ ಸಹ ಪತ್ತೆಯಾಗಿದೆ.
PublicNext
01/01/2021 08:13 am