ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮ್​ ಗೋಪಾಲ್ ವರ್ಮಾ ವಿರುದ್ಧ ವಂಚನೆ ಪ್ರಕರಣ ದಾಖಲು

ಹೈದರಾಬಾದ್‌: ಖ್ಯಾತ ಸಿನಿಮಾ ನಿರ್ದೇಶಕ ರಾಮ್​ ಗೋಪಾಲ್ ವರ್ಮಾ ವಿರುದ್ಧ ಹೈದರಾಬಾದ್‌ನಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ನಿರ್ಮಾಣ ಸಂಸ್ಥೆಯ ಮಾಲೀಕರೋರ್ವರು ಈ ಬಗ್ಗೆ ದೂರು ನೀಡಿದ್ದು, ಆರ್‌ಜಿವಿ 56 ಲಕ್ಷ ರೂ. ಸಾಲ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಮಿಯಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮ್ ಗೋಪಾಲ್ ವರ್ಮಾ ಅವರ ಸ್ನೇಹಿತರ ಮೂಲಕ 2019ರಲ್ಲಿ ದೂರುದಾರರು ಅವರನ್ನು ಭೇಟಿಯಾಗಿದ್ದರು. ಮರು ವರ್ಷ ಆರ್​ಜಿವಿ 2020ರ ತೆಲುಗು ಚಿತ್ರ 'ದಿಶಾ'ಗಾಗಿ 8 ಲಕ್ಷ ರೂ. ಸಾಲವನ್ನು ಪಡೆದಿದ್ದರು. 2020ರ ಜನವರಿ 22ಕ್ಕೆ ಚೆಕ್ ಮೂಲಕ ರಾಮ್ ಗೋಪಾಲ್ ವರ್ಮಾ ಮತ್ತೆ 20 ಲಕ್ಷ ರೂ. ಕೇಳಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Edited By : Vijay Kumar
PublicNext

PublicNext

25/05/2022 01:45 pm

Cinque Terre

75.74 K

Cinque Terre

0