ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಂಸಲೇಖ ಹೇಳಿಕೆ ಪರವಹಿಸಿ ಸಂವಿಧಾನ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನಾ ಜಾಥ

ಬೆಂಗಳೂರು : ನಗರದ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಹಸಂಲೇಖ ಹೇಳಿಕೆ ಪರವಹಿಸಿ ಸಂವಿಧಾನ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನಾ ಕಾಲ್ನಡಿಗೆ ಜಾಥಾ ನಡೆಯಿತು.ಇನ್ನು ನೂರಾರು ಸಂಖ್ಯೆಯಲ್ಲಿ ಹಂಸಲೇಖ ಬೆಂಬಲಿಗರು ಮೆರವಣಿಗೆಯಲ್ಲಿ ಭಾಗವಹಿಸಿದ್ದು ಬಳಿಕ ಫ್ರೀಡಂ ಪಾರ್ಕ್ ನಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ನಾದಬ್ರಹ್ಮ ಹಂಸಲೇಖ ಭಾಗಿಯಾಗುವ ಸಾಧ್ಯತೆಯೂ ಇದೆ.

ಸದ್ಯ ಫ್ರೀಡಂ ಪಾರ್ಕ್ ನಲ್ಲಿ ನಟ ಚೇತನ್ ಅಹಿಂಸಾ, ಹಿರಿಯ ವಕೀಲ ದ್ವಾರಕನಾಥ್ ಚೊಕ್ಕ ಭಾಗಿಯಾಗಿದ್ದಾರೆ. ಪ್ರತಿಭಟನಾ ಜಾಥಾಗೆ ಕನ್ನಡಪರ, ದಲಿತ ಪರ, ಹಿಂದುಳಿದ ವರ್ಗಗಳ ಸಂಘಟನೆಗಳು ಸಾಥ್ ನೀಡಿವೆ.

ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಹೊರಟ rallyಯಲ್ಲಿ ಹಲವು ಸಂಘಟನೆಗಳು ನೂರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ.

Edited By : Manjunath H D
PublicNext

PublicNext

26/11/2021 03:06 pm

Cinque Terre

58.44 K

Cinque Terre

3