ಹೈದರಾಬಾದ್: ಲೈಂಗಿಕತೆಯ ಭರವಸೆ ನೀಡುವ ಕೆಲವು ಡೇಟಿಂಗ್ ಅಪ್ಲಿಕೇಶನ್‌ಗಳು ಈಗ ಆತಂಕಕಾರಿ ಪರಿಸ್ಥಿತಿಯನ್ನು ಸೃಷ್ಟಿಸುತ್ತಿವೆ. ಇಂತಹ ಆ್ಯಪ್‌ಗಳಲ್ಲಿ ಬಾಹುಬಲಿ ಸಿನಿಮಾದಲ್ಲಿ ಅಭಿನಯಿಸಿರುವ ನಟಿಯ ಫೋಟೋಗಳನ್ನು ಅಪ್ಲೋಡ್ ಆಗಿವೆ. ಈ ಕೃತ್ಯಕ್ಕೆ ನಟಿಯ ಬೇಸರ ವ್ಯಕ್ತಪಡಿಸಿದ್ದಾರೆ.
ಹೌದು. 'ಬಾಹುಬಲಿ' ಸಿನಿಮಾದ ಎರಡನೇ ಭಾಗದಲ್ಲಿ ನಟಿ ಅನುಷ್ಕಾ ಅವರ ಅತ್ತಿಗೆ ಪಾತ್ರದಲ್ಲಿ ಕಾಣಿಸಿಕೊಂಡ ಆಶ್ರಿತಾ ವೇಮುಗಂತಿ ಅವರ ಫೋಟೋವನ್ನು ದುಷ್ಕರ್ಮಿಗಳು ಬಳಸಿಕೊಂಡಿದ್ದಾರೆ. ಆಶ್ರಿತಾ ವೇಮುಗಂತಿ ಅವರು 'ಯಾತ್ರಾ' ಸಿನಿಮಾದಲ್ಲಿ ವೈ.ಎಸ್. ವಿಜಯಮ್ಮ ಪಾತ್ರದಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಶೇಡಿ ಡೇಟಿಂಗ್ ಅಪ್ಲಿಕೇಶನ್‌ನ ಜಾಹೀರಾತು ಕಾಣಿಸಿಕೊಂಡಿದೆ. ಆದರೆ ಈ ಆ್ಯಪ್ನಲ್ಲಿ ಆಶ್ರಿತಾ ವೇಮುಗಂತಿಯವರ ಫೋಟೋಗಳನ್ನು ಪ್ರೊಫೈಲ್ ಚಿತ್ರವಾಗಿ ಇರಿಸಲಾಗಿದೆ. ಇಂತಹ ಹಲವು ಪೋಸ್ಟ್‌ಗಳಿಂದ ಆಘಾತಕ್ಕೊಳಗಾದ ಆಶ್ರಿತಾ, ಇದೀಗ ಆ ಡೇಟಿಂಗ್ ಆ್ಯಪ್‌ಗಳ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಅದಕ್ಕಾಗಿ ಅವರು ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.
PublicNext
26/10/2021 08:48 pm