ಮುಂಬೈ:ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಜೈಲಲ್ಲಿ ಇದ್ದು ಇದ್ದು ಮನೆಯನ್ನ ಮಿಸ್ ಮಾಡಿಕೊಳ್ಳುತ್ತಿದ್ದಾನೆ. ಮನೆಯವರ ಜೊತೆಗೆ ಅಷ್ಟೇ ಪ್ರೀತಿಯಿಂದಲೇ ಇದ್ದ ಆರ್ಯನ್, ಈಗ ಜೈಲು ಪಾಲಾಗಿ ಎಲ್ಲ ಸಂತೋಷದ ಕ್ಷಣಗಳನ್ನ ಕಳೆದುಕೊಳ್ಳುತ್ತಿದ್ದಾನೆ. ಇತ್ತೀಚಿಗೆ ಗೌರಿ ಖಾನ್ ಜನ್ಮ ದಿನ ಇತ್ತು. ಆಗಲೂ ಆರ್ಯನ್ ಗೆ ವಿಶ್ ಮಾಡಲು ಅವಕಾಶ ಇರಲಿಲ್ಲ. ಈಗ ಶಾರುಕ್ ಖಾನ್ ಹಾಗೂ ಗೌರಿ ಖಾನ್ 30 ನೇ ವಿವಾಹ ವಾರ್ಷಿಕೋತ್ಸವ ಇದೆ. ಇದಕ್ಕಾದರೂ ಅವಕಾಶ ಸಿಗಬಹುದು ಎಂದು ಆರ್ಯನ್ ಟ್ರೈ ಮಾಡಿದ್ದಾನೆ. ಒಂದೇ ಒಂದು ವೀಡಿಯೋ ಕಾಲ್ ಮಾಡ್ತೀನಿ ಕೊಡಿ ಅಂತ ಜೈಲು ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾನೆ. ಮುಂದೇನ್ ಆಯಿತು. ಹೇಳ್ತೀವಿ ಬನ್ನಿ.
ಆರ್ಯನ್ ಖಾನ್ ಬೇಡಿಕೆಯನ್ನ ಜೈಲು ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ವೀಡಿಯೋ ಕಾಲ್ ಮಾಡಿ ಮಾತನಾಡುವ ಅವಕಾಶ ಇಲ್ಲವೇ ಇಲ್ಲ.ಹಾಗಾಗಿಯೇ ನಾವು ಆರ್ಯನ್ ಖಾನ್ ಗೆ ವೀಡಿಯೋ ಕಾಲ್ ಮಾಡೋಕೆ ಕೊಡಲಿಲ್ಲ ಅಂತಲೇ ಜೈಲು ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಆರ್ಯನ್ ಖಾನ್ ಆಸೆ ನುಚ್ಚು ನೂರು ಆಗಿದೆ.
PublicNext
26/10/2021 01:28 pm