ಮುಂಬೈ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ನೀಲಿ ಚಿತ್ರದ ಕೇಸ್ ಎಲ್ಲಿಗೆ ಬಂತು ಅನ್ನೋ ಹೊತ್ತಿಗೆ, ಕುಂದ್ರಾ ವಿರುದ್ಧ ದೂರು ಕೊಟ್ಟಿದ್ದ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಈಗ ಅವರ ವಿರುದ್ಧ ಎಫ್ ಐ ಆರ್ ದಾಖಲಿಸಬೇಕೆಂದು ಕೇಳಿಕೊಳ್ತಿದ್ದಾರೆ.
ಹೌದು. ಶೆರ್ಲಿನ್ ಚೋಪ್ರಾ ರಾಜ್ ಕುಂದ್ರಾ ಸೇರಿ ನಟಿ ಶಿಲ್ಪಾ ಶೆಟ್ಟಿ ಮೇಲೂ ಕೆಂಡಕಾರಿದ್ದಾರೆ. ನನ್ನ ವಂಚಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಅಕ್ಟೋಬರ್-14 ರಂದು ಶೆರ್ಲಿನ್ ದೂರು ಕೊಟ್ಟಿದ್ದರು. ಆದರೆ, ಈಗ ರಾಜ್ ಕುಂದ್ರಾ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ. ಜೀವ ಬೆದರಿಕೆಯನ್ನೂ ಹಾಕಿದ್ದಾರೆ. ಅವರ ವಿರುದ್ಧ ಎಫ್ ಐ ಆರ್ ದಾಖಲಿಸಿ ಅಂತ ಶೆರ್ಲಿನ್ ಚೋಪ್ರಾ ಕೇಳಿದ್ದಾರೆ.
PublicNext
16/10/2021 12:22 pm