ಮುಂಬೈ: ಮುಂಬೈ ಕ್ರೂಸ್ ಡ್ರಗ್ಸ್ ಕೇಸ್ ಸಂಬಂಧಿಸಿಂತೆ ಬಾಲಿವುಡ್ ನ ಫಿಲ್ಮಂ ಮೇಕರ್ ಇಮ್ತಿಯಾಜ್ ಖತ್ರಿಗೆ ಮತ್ತೆ
ವಿಚಾರಣೆಗೆ ಹಾಜರಾಗೋವಂತೆ NCB ಸಮನ್ಸ್ ನೀಡಿದೆ.
ಮುಂಬೈ ಕ್ರೂಸ್ ಡ್ರಗ್ಸ್ ಕೇಸ್ ಅಲ್ಲಿ ಇನ್ನು ಯಾರೆಲ್ಲ ಸಿಕ್ಕಿ ಬೀಳ್ತಾರೋ ಏನೋ. ಚಿತ್ರ ನಿರ್ಮಾಪಕ ಇಮ್ತಿಯಾಜ್ ಖತ್ರಿಗೆ ವಿಚಾರಣೆಗೆ ಹಾಜರಾಗೋವಂತೆ NCB ಸಮನ್ಸ್ ಕೊಟ್ಟಿದೆ. ಅದರಂತೆ ಇಂದು ನಿರ್ಮಾಪಕ ವಿಚಾರಣೆಗೆ ಬರಬೇಕಿದೆ. ಮೊನ್ನೆ ಶನಿವಾರ ಕೂಡ NCB ಸತತ 8 ಗಂಟೆಗಳ ಕಾಲ ಇಮ್ತಿಯಾಜ್ ಖತ್ರಿ ವಿಚಾರಣೆ ನಡೆಸಿದೆ. ಈಗ ಮತ್ತೊಮ್ಮೆ ವಿಚಾರಿಸಲು ಕರೆದಿದೆ. ಕ್ರೂಸ್ ಪಾರ್ಟಿ ಆಯೋಜಿಸಿದ್ದ,ದೆಹಲಿ ಮೂಲದ ಇಬ್ಬರು ಆಯೋಜಕರನ್ನ ಕೂಡ NCB ವಿಚಾರಣೆ ನಡೆಸಲು ಮುಂದಾಗಿದೆ.
PublicNext
12/10/2021 12:14 pm