ಮುಂಬೈ: ಶಾರುಖ್ ಖಾನ್ ಮುದ್ದಿನ ಮಗನಿಂದ ಬಾಲಿವುಡ್ ಮತ್ತಿನ ಲೋಕದ ಮತ್ತಷ್ಟು ಕೊಳೆ ಆಚೆ ಬಂದಿದೆ. ಡ್ರಗ್ಸ್ ಪಾರ್ಟಿ ನಡೆಯುತ್ತಿದ್ದ ಕ್ಯೂಸ್ ಮೇಲೆ ಎನ್ಸಿಬಿ ಮಾಡಿದ ರೇಡ್ ವೇಳೆ ಸಿಕ್ಕಿಬಿದ್ದಿದ್ದಾನೆ. ಸುದೀರ್ಘ ವಿಚಾರಣೆಯ ಬಳಿಕ ಅರೆಸ್ಟ್ ಆಗಿದ್ದಾನೆ.
ಅಚ್ಚರಿ ಏನೆಂದರೆ, ಹಲವು ವರ್ಷಗಳ ಹಿಂದೆಯೇ ಶಾರುಖ್ ಖಾನ್ ಅವರು ಮಗನ ಬಗ್ಗೆ ಮಾತನಾಡಿದ್ದರು. ತಮ್ಮ ಪುತ್ರ ಡ್ರಗ್ಸ್ ಸೇವಿಸಲಿ, ಹುಡುಗಿಯರ ಹಿಂದೆ ಬೇಕಾದರೂ ಹೋಗಲಿ ಎಂದು ಅವರು ಹೇಳಿರುವ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಶಾರುಖ್ ಖಾನ್ ಮತ್ತು ಗೌರಿ ಖಾನ್ ಜೊತೆಯಾಗಿ 1997ರಲ್ಲಿ ಸಂದರ್ಶನವೊಂದನ್ನು ನೀಡಿದ್ದರು. ಅದರಲ್ಲಿ ಶಾರುಖ್ ಖಾನ್ ತಮ್ಮ ಪುತ್ರ ಆರ್ಯನ್ ಖಾನ್ ಬಗ್ಗೆ ಮಾತನಾಡಿದ್ದರು. ‘ಆರ್ಯನ್ಗೆ ನಾನು ಹೇಳಿಬಿಟ್ಟಿದ್ದೇನೆ. ಅವನು ಹುಡುಗಿಯರ ಹಿಂದೆ ಹೋಗಬಹುದು. ಎಷ್ಟು ಬೇಕಾದರೂ ಸಿಗರೇಟ್ ಸೇದಬಹುದು. ಡ್ರಗ್ಸ್ ಸೇವಿಸಬಹುದು ಮತ್ತು ಸೆಕ್ಸ್ ಕೂಡ ಮಾಡಬಹುದು. ನಾನು ಏನೆಲ್ಲ ಮಾಡಿಲ್ಲವೋ ಅದನ್ನೆಲ್ಲ ಆರ್ಯನ್ ಮಾಡಬಹುದು. ಚಿಕ್ಕವಯಸ್ಸಿನಲ್ಲೇ ಶುರುಮಾಡಲಿ. ಲೈಫ್ ಎಂಜಾಯ್ ಮಾಡಲಿ' ಎಂದು ಹೇಳಿದ್ದರು.
ಪಕ್ಕದಲ್ಲೇ ಕುಳಿತು ಇದನ್ನೆಲ್ಲ ಕೇಳಿಸಿಕೊಂಡಿದ್ದ ಗೌರಿ ಖಾನ್ ನಕ್ಕಿದ್ದರು. ಆ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಅದನ್ನು ಕಂಡು ಜನರು ಖಾರವಾಗಿ ಟೀಕೆ ಮಾಡುತ್ತಿದ್ದಾರೆ. ಹೀಗೆ ಬೆಳೆಸಿದ್ದರ ಪರಿಣಾಮವಾಗಿಯೇ ಆರ್ಯನ್ ಖಾನ್ ಇಂದು ಹಾದಿ ತಪ್ಪಿದ್ದಾರೆ ಎಂದು ನೆಟ್ಟಿಗರು ಕುಟುಕಿದ್ದಾರೆ.
PublicNext
04/10/2021 09:23 am