ರಾಮನಗರ: 'ಲವ್ ಯು ರಚ್ಚು' ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್ ತಂತಿ ತಗುಲಿ ಫೈಟರ್ ವಿವೇಕ್ ಸಾವನ್ನಪ್ಪಿದ್ದು, ರಂಜಿತ್ ಎಂಬ ಯುವಕನ ಸ್ಥಿತಿ ಚಿಂತಾಜನಕವಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಮನಗರ ಪೊಲೀಸ್ ನಾಲ್ವರನ್ನು ವಶಕ್ಕೆ ಪಡೆದಿದೆ.
ರಾಮನಗರ ಡಿವೈಎಸ್‌ಪಿ ಮೋಹನ್ ಕುಮಾರ್ ಹಾಗೂ ಇನ್ಸ್‌ಪೆಕ್ಟರ್ ಆರ್‌ಆರ್ ನಗರ ಆಸ್ಪತ್ರೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆಹಾಕಿದ್ದಾರೆ. ಪೊಲೀಸರು ಸಿನಿಮಾದ ಸಹ ನಿರ್ದೇಶಕ ಶಂಕರ್ ರಾಜ್, ಸ್ಟಂಟ್ ಮಾಸ್ಟರ್ ವಿನೋದ್ ಮತ್ತು ಜೆಸಿಬಿ ಚಾಲಕರನ್ನು ಬಂಧಿಸಿದ್ದಾರೆ. ಜೊತೆಗೆ ಶೂಟಿಂಗ್‌ಗೆ ಪರವಾನಗಿ ಪಡೆಯದ ಜಮೀನು ಮಾಲೀಕ ಪುಟ್ಟರಾಜು ಅವರನ್ನು ವಶಕ್ಕೆ ಪಡೆಯಲಾಗಿದೆ.
PublicNext
09/08/2021 10:50 pm