ಚೆನ್ನೈ: ಖ್ಯಾತ ಬಹುಭಾಷಾ ನಟಿ ಯಶಿಕಾ ಆನಂದ್ ಅವರು ಚಲಿಸುತ್ತಿದ್ದ ಕಾರು ಜುಲೈ 24ರ ರಾತ್ರಿ ಅಪಘಾತಕ್ಕೆ ಈಡಾಗಿತ್ತು. ಅಪಘಾತದ ತೀವ್ರತೆಗೆ ಅವರ ಸ್ನೇಹಿತೆ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕೂಡಲೇ ಯಶಿಕಾರನ್ನು ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಅವರ ಜೀವ ಉಳಿಯಿತು. ಆದರೆ ಅವರು ಇನ್ನೂ ಕೆಲವು ತಿಂಗಳ ಕಾಲ ಹಾಸಿಗೆ ಬಿಟ್ಟು ಮೇಲೇಳದ ಸ್ಥಿತಿಯಲ್ಲಿ ಇದ್ದಾರೆ.
ಮಲಗಿದ್ದಲ್ಲೇ ಮಲ-ಮೂತ್ರ ಮಾಡಿಕೊಳ್ಳುವ ನರಕ ಸದೃಶ್ಯ ಪರಿಸ್ಥಿತಿ ಅವರದ್ದಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಕೆಲವು ಗಾಸಿಪ್ಗಳಿಂದ ಅವರಿಗೆ ನೋವಾಗಿದೆ. ಅಪಘಾತ ನಡೆದಾಗ ನಿಜಕ್ಕೂ ಆಗಿದ್ದು ಏನು ಎಂಬುದನ್ನು ಯಶಿಕಾ ಈಗ ವಿವರಿಸಿದ್ದಾರೆ.
ಇನ್ ಸ್ಟಾ ಖಾತೆಯಲ್ಲಿ ಏನಿದೆ..?
ನನ್ನ ಪೆಲ್ವಿಕ್ ಮೂಳೆಯಲ್ಲಿ ಅನೇಕ ಮುರಿತಗಳಾಗಿವೆ. ಹಾಗೆಯೇ ಬಲಗಾಲಿಗೂ ಗಂಭೀರ ಗಾಯಗಳಾಗಿವೆ. ಮುಂದಿನ 5 ತಿಂಗಳ ಕಾಲ ಎದ್ದೇಳಲು ಹಾಗೂ ನಡೆದಾಡಲು ಸಾಧ್ಯವಿಲ್ಲ. ಸದ್ಯ ಮಲಗಿದ್ದಲ್ಲೇ ಇದ್ದು, ಅಲ್ಲಿಯೇ ಮಲ-ಮೂತ್ರ ವಿಸರ್ಜನೆಯಾಗುತ್ತಿದೆ. ಬಲ, ಎಡ ಹೀಗೆ ಯಾವುದೇ ಭಾಗಕ್ಕೂ ತಿರುಗಲೂ ಆಗುತ್ತಿಲ್ಲ. ಹೀಗೆ ಹಲವು ದಿನಗಳಿಂದ ಒಂದೇ ರಿಯಾಗಿ ಮಲಗುತ್ತಿದ್ದೇನೆ. ಬೆನ್ನಿನ ಭಾಗಕ್ಕೂ ಗಂಭೀರ ಗಾಯಗಳಾಗಿವೆ. ನನ್ನ ಮುಖದ ಭಾಗಕ್ಕೆ ಯಾವುದೇ ರೀತಿಯ ಗಾಯಗಳಾಗದಿರುವುದೇ ನನ್ನ ಅದೃಷ್ಟ. ಆದರೆ ಇದು ನನಗೆ ಪುನರ್ಜನ್ಮವಾಗಿದೆ.
ಘಟನೆಯ ಬಳಿಕ ಮಾನಸಿಕ ಹಾಗೂ ದೈಹಿಕವಾಗಿ ಗಾಯಗೊಂಡಿದ್ದೇನೆ. ದೇವರು ನನಗೆ ಶಿಕ್ಷೆ ನೀಡಿದ್ದಾನೆ. ಆದರೆ ಘಟನೆಯಲ್ಲಿ ನಾನು ಕಳೆದುಕೊಂಡಿರುವ ನೋವಿಗಿಂತ ಇದೇನೂ ದೊಡ್ಡದಲ್ಲ ಎಂದು ಯಶಿಕಾ ಬರೆದುಕೊಂಡಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿರುವ ಐಶಿಕಾ ಅವರಿಗೆ ಸರ್ಜರಿ ಯಶಸ್ವಿಯಾಗಿದ್ದು, ಆಗಸ್ಟ್ 3 ರಂದು ಐಸಿಯುವಿನಿಂದ ಜನರಲ್ ವಾರ್ಡ್‍ಗೆ ಸ್ಥಳಾಂತರ ಮಾಡಲಾಗಿದೆ.
PublicNext
04/08/2021 11:10 pm