ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಕೇವಲ 9 ವರ್ಷ ವಯಸ್ಸಿನ ಪುತ್ರ ವಿಯಾನ್ , ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯನಾಗಿದ್ದಾನೆ. ತನ್ನ ತಂದೆಯ ಬಂಧನದ ಹಿನ್ನಲೆಯಲ್ಲಿ ಆತ ಇನ್ಸ್ಟಾಗ್ರಾಂ ನಲ್ಲಿ ಹಾಕಿದ ಪೋಸ್ಟ್ ಈಗ ಚರ್ಚೆಗೆ ಕಾರಣವಾಗಿದೆ.
ಜುಲೈ 19 ರಿಂದ ಇನ್‍ಸ್ಟಾಗ್ರಾಮ್‍ನಿಂದ ದೂರವಾಗಿದ್ದ ವಿಯಾನ್ ಕುಂದ್ರಾ ಮತ್ತೆ ಹೊಸ ಪೋಸ್ಟ್ನೊಂದಿಗೆ ಮರಳಿದ್ದಾನೆ. ಅದು ಕೂಡ ತಾಯಿ ಶಿಲ್ಪಾ ಶೆಟ್ಟಿ ಜೊತೆಗಿರುವ ಫೋಟೋದೊಂದಿಗೆ ಇದಾಗಿದೆ. ತಾಯಿಯನ್ನು ತಬ್ಬಿಕೊಂಡಿರುವ 3 ಚಿತ್ರವನ್ನು ವಿಹಾನ್ ಶೇರ್ ಮಾಡಿದ್ದು, ಈ ಸಮಯವೂ ಕಳೆದು ಹೋಗುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಬಾಲಿವುಡ್ ತಾರೆಯರು ಮೆಚ್ಚುಗೆ ಸೂಚಿಸಿದ್ದಾರೆ.
ಅಶ್ಲೀಲ ಚಿತ್ರ ನಿರ್ಮಾಣದ ಆರೋಪದ ಮೇಲೆ ರಾಜ್ ಕುಂದ್ರಾ ಅವರನ್ನು ಜುಲೈ 19 ರಂದು ಬಂಧಿಸಲಾಗಿತ್ತು. ಅದರಂತೆ ಜುಲೈ 27 ರ ತನಕ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಬ್ಲ್ಯೂ ಫಿಲಂ ದಂಧೆಯಲ್ಲಿ ಅವರು ಭಾಗಿಯಾಗಿದ್ದಾರೆ ಎಂಬುದಕ್ಕೆ ಪೊಲೀಸರು ಪುರಾವೆ ಒದಗಿಸಿದ್ದರು. ಈ ಹಿನ್ನಲೆಯಲ್ಲಿ ನ್ಯಾಯಾಲಯ ರಾಜ್ ಕುಂದ್ರಾಗೆ ನ್ಯಾಯಾಂಗ ಬಂಧನದ ಅವಧಿಯನ್ನು ಇನ್ನೂ ಎರಡು ವಾರಗಳ ಕಾಲ ವಿಸ್ತರಿಸಿದೆ.
PublicNext
04/08/2021 07:35 am