ಮುಂಬೈ : ನಟ ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಎಂ.ಎಸ್ ದೋನಿ ಚಿತ್ರದ ಮತ್ತೊಬ್ಬ ನಟ ಆತ್ಮಹತ್ಯ ಮಾಡಿಕೊಂಡಿದ್ದಾರೆ. ‘ಎಂಎಸ್ ಧೋನಿ- ದಿ ಅನ್ಟೋಲ್ಡ್ ಸ್ಟೋರಿ’ ಎಂಬ ಚಿತ್ರದಲ್ಲಿ ಸುಶಾಂತ್ ಜೊತೆ ಅಭಿನಯಿಸಿದ್ದ ನಟ ಸಂದೀಪ್ ನಾಹರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನ ಗೋರೆಗಾಂವ್ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಎಎಫ್ಪಿ ಸುದ್ದಿ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.ಸಂದೀಪ್ ಅವರು ನೇಣು ಬಿಗಿದುಕೊಂಡಿದ್ದರು ಎಂದು ಅವರ ಪತ್ನಿ ಹೇಳಿದ್ದಾರೆ. ಮೃತದೇಹವನ್ನ ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದ್ದು, ವರದಿ ಬಳಿಕ ಸುಳಿವು ಸಿಗಬಹುದು ಎಂದು ಡಿಸಿಪಿ ವಿಶಾಲ್ ಠಾಕೂರ್ ಹೇಳಿದ್ದಾರೆ.
ಬಾಲಿವುಡ್ ಹಾಗೂ ಕಿರುತೆರೆ ನಟರಾಗಿದ್ದ ಸಂದೀಪ್ ನಾಹರ್ ಅವರು ಎಂಎಸ್ ಧೋನಿ ದ ಅನ್ ಟೋಲ್ಡ್ ಸ್ಟೋರಿ ಚಿತ್ರವಲ್ಲದೆ ಕೇಸರಿ ಮೊದಲಾದ ಸಿನಿಮಾಗಳಲ್ಲೂ ಅಭಿನಯಿಸಿದ್ದರು. ಕಿರುತೆರೆಯಲ್ಲಿ ಇವರು ಹೆಚ್ಚು ಖ್ಯಾತರಾಗಿದ್ದಾರೆ. ಇವರ ಈ ಆತ್ಮಹತ್ಯೆಗೆ ಸಾಂಸಾರಿಕ ಜಿಗುಪ್ಸೆಯೇ ಕಾರಣ ಎನ್ನಲಾಗಿದೆ. ಸಾಯುವ ಮುನ್ನ ಅವರು ಈ ವಿಚಾರವನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
PublicNext
16/02/2021 07:52 am