ಮುಂಬೈ: ಪ್ರತಿ ವರ್ಷ ಡಿಸೆಂಬರ್ 27ರಂದು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಜನ್ಮದಿನ ಆಚರಿಸಿಕೊಂಡರು. ಅವರ 55ನೇ ಹುಟ್ಟುಹಬ್ಬಕ್ಕೆ ತಮ್ಮಂದಿರಾದ ಸೋಹೈಲ್ ಖಾನ್, ಅರ್ಬಾಜ್ ಖಾನ್ ಕೂಡ ದುಬೈನಿಂದ ಬಂದಿದ್ದರು.
ಸಲ್ಮಾನ್ ಖಾನ್ ಅವರು ಮುಂಬೈ ಹೊರವಲಯದಲ್ಲಿರುವ ಪಾನ್ವೆಲ್ ಫಾರ್ಮ್ಹೌಸ್ನಲ್ಲಿ ರಾತ್ರಿ ವೇಳೆಗೆ ಜನ್ಮದಿನ ಆಚರಿಸಿಕೊಂಡಿದ್ದರು. ಸೋಹೈಲ್ ಖಾನ್, ಅರ್ಬಾಜ್ ಖಾನ್ ಮತ್ತು ನಿರ್ವಾನ್ ಖಾನ್ ಎಲ್ಲರೂ ಡಿಸೆಂಬರ್ 25ರಂದು ದುಬೈನಿಂದ ಮುಂಬೈಗೆ ಮರಳಿದ್ದರು. ಕೋವಿಡ್ ನಿಯಮದಂತೆ ಎಲ್ಲರೂ ಐಸೋಲೇಶನ್‌ಗೆ ಒಳಗಾಗಬೇಕಿತ್ತು. ಆದರೆ ಅದನ್ನು ಕೇರ್ ಮಾಡದೇ ಎಲ್ಲರೂ ಮನೆಗೆ ತೆರಳಿದ್ದಾರೆ. ಹೀಗಾಗಿ ಅವರ ವಿರುದ್ಧ ಬೃಹತ್ ಮುಂಬೈ ಮಹಾನಗರ ಪಾಲಿಕೆಯು (ಬಿಎಂಸಿ) ಪ್ರಕರಣ ದಾಖಲಿಸಿದ್ದು, ಎಫ್‌ಐಆರ್ ಸಹ ದಾಖಲಾಗಿದೆ.
PublicNext
05/01/2021 02:17 pm