ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೊಮ್ಮನ್‌ ಇರಾನಿ ಸಂಬಂಧಿಯ ಬೆಂಗ್ಳೂರಿನ ಮನೆಯಲ್ಲಿ ಕಳ್ಳತನ

ಬೆಂಗಳೂರು: ಬಾಲಿವುಡ್‌ ನಟ ಬೊಮ್ಮನ್‌ ಇರಾನಿ ಸೋದರ ಸಂಬಂಧಿಯ ಬೆಂಗಳೂರಿನ ಮನೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕೆಟ್ ಹಾಗೂ ವಿದೇಶಿ ಕರೆನ್ಸಿ ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣದ ಸಂಬಂಧ ಮನೆ ಕೆಲಸದಾಕೆ ಹಾಗೂ ಆಕೆಯ ಮಗನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆ.ಜಿ.ಹಳ್ಳಿ ನಿವಾಸಿಗಳಾದ ಮೇರಿ ಅಲಿಸ್ ಹಾಗೂ ಆಕೆಯ ಮಗ ಮೈಕೆಲ್ ವಿನ್ಸೆಂಟ್‌ ಬಂಧಿತ ಆರೋಪಿಗಳು. ಬೊಮ್ಮನ್‌ ಇರಾನಿ ಸೋದರ ಸಂಬಂಧಿ ಖುರ್ಷೀದ್ ಇರಾನಿ ಅವರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ

ಖುರ್ಷೀದ್ ಅವರ ಮನೆಯ ಲಾಕರ್‌ನಲ್ಲಿ 100 ಗ್ರಾಂನ ಒಂಬತ್ತು ಚಿನ್ನದ ಬಿಸ್ಕೆಟ್, 85 ಲಕ್ಷ ನಗದು ಹಾಗೂ 11 ಲಕ್ಷ ಮೌಲ್ಯದ 15 ಸಾವಿರ ಯುಎಸ್‌ ಕರೆನ್ಸಿಗಳನ್ನು ಇಟ್ಟಿದ್ದರು. ನವೆಂಬರ್‌ 29ರಂದು ಲಾಕರ್ ನೋಡಿದಾಗ ಚಿನ್ನದ ಬಿಸ್ಕೆಟ್, ನಗದು ಹಾಗೂ ವಿದೇಶಿ ಕರೆನ್ಸಿ ಕಳವು ಆಗಿರುವುದು ಬೆಳಕಿಗೆ ಬಂದಿದೆ.

Edited By : Vijay Kumar
PublicNext

PublicNext

14/12/2020 02:34 pm

Cinque Terre

83.09 K

Cinque Terre

0