ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಿವುಡ್ ನಲ್ಲಿ ಲೈಂಗಿಕ ತೃಷೆಯುಳ್ಳ, ಪರಭಕ್ಷಕರು ತುಂಬಿಹೋಗಿದ್ದಾರೆ ನಟಿ ಕಂಗನಾ ಗಂಭೀರ ಆರೋಪ

ಮುಂಬೈ: ನಟಿ ಪಾಯಲ್ ಘೋಷ್ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರೆಸಿದ್ದಾರೆ.

ಪಾಯಲ್ ಪರ ವಕೀಲರು ಅನುರಾಗ್ ವಿರುದ್ಧ ದೂರು ಕೂಡ ದಾಖಲಿಸಿದ್ದಾರೆ.

ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಅನುರಾಗ್ ಕಶ್ಯಪ್, ಈ ಆರೋಪದಲ್ಲಿ ಹುರುಳಿಲ್ಲ. ನಾನು ಪಾಯಲ್ ಗೆ ಲೈಂಗಿಕ ದೌರ್ಜನ್ಯ ಎಸಗಿಲ್ಲ ಎಂದಿದ್ದಾರೆ.

ಹೀಗಿರುವಾಗ ನಟಿ ಕಂಗನಾ ರಣಾವತ್ ಹೊಸ ಬಾಂಬ್ ಸಿಡಿಸಿದ್ದಾರೆ. ಪಾಯಲ್ ಗೆ ನನ್ನ ಬೆಂಬಲವಿದೆ.

ಅವರಿಗೆ ಆಗಿರುವಂಥ ಕೆಟ್ಟ ಅನುಭವಗಳು ತನಗೂ ಆಗಿವೆ ಎಂದು ಹೇಳಿದ್ದಾರೆ. ಪ್ರಮುಖ, ದೊಡ್ಡ ನಟರು ಎಂದು ಗುರುತಿಸಿಕೊಂಡವರಿಂದಲೇ ನನಗೂ ಕೆಟ್ಟ ಅನುಭವ ಆಗಿದೆ.

ಶೂಟಿಂಗ್, ಪಾರ್ಟಿ ಸಮಯದಲ್ಲಿ ಇಂಥದ್ದನ್ನೆಲ್ಲ ಮಾಡುತ್ತಾರೆ.

ರೂಂಗಳು, ವ್ಯಾನ್ ಗಳು ಲಾಕ್ ಆಗುತ್ತಿದ್ದಂತೆ…ಅಥವಾ ಪಾರ್ಟಿಗಳಲ್ಲಿ ಮಾಡುವ ಫ್ರೆಂಡ್ಲಿ ಡ್ಯಾನ್ಸ್ ಸಂದರ್ಭದಲ್ಲಿ ಥಟ್ಟನೆ ತಮ್ಮ ಗುಪ್ತಾಂಗವನ್ನು ಪ್ರದರ್ಶಿಸುತ್ತಾರೆ.

ಅಷ್ಟೇ ಅಲ್ಲ..ಒಂದು ಕ್ಷಣದಲ್ಲಿ ಅವರ ನಾಲಿಗೆಯನ್ನು ನಮ್ಮ ಬಾಯಲ್ಲಿ ನುಗ್ಗಿಸಿಬಿಡುತ್ತಾರೆ. ಏನೋ ಕೆಲಸ ಇರುವಂತೆ ಅಪಾಯಿಂಟ್ ಮೆಂಟ್ ತೆಗೆದುಕೊಂಡು ಮನೆಗೆ ಬರುತ್ತಾರೆ.

ನಂತರ ನಮ್ಮನ್ನು ಬಲವಂತ ಮಾಡುತ್ತಾರೆ. ಇಂಥ ಕೆಟ್ಟಕೆಟ್ಟ ಅನುಭವಗಳು ನನಗೂ ಆಗಿವೆ ಎಂದು, ಯಾರೊಬ್ಬರ ಹೆಸರು ಹೇಳದೆ ಕುಟುಕಿದ್ದಾರೆ.

ಬಾಲಿವುಡ್ ನಲ್ಲಿ ಲೈಂಗಿಕ ತೃಷೆಯುಳ್ಳ, ಪರಭಕ್ಷಕರು ತುಂಬಿಹೋಗಿದ್ದಾರೆ.

ಹೆಸರಿಗೊಂದು ಮದುವೆಯಾಗುತ್ತಾರೆ. ಆದರೆ ಅವರ ಸಂತೋಷಕ್ಕೆ ಪ್ರತಿದಿನವೂ ಸಣ್ಣ ವಯಸ್ಸಿನ ಯುವತಿಯರು ಬೇಕು. ಅಷ್ಟೇ ಅಲ್ಲ ದುರ್ಬಲ ಯುವಕರನ್ನೂ ಹೀಗೆ ನಡೆಸಿಕೊಳ್ಳುತ್ತಾರೆ ಎಂದು ಕಂಗನಾ ಆರೋಪಿಸಿದ್ದಾರೆ.

2018ರಲ್ಲಿ ಶುರುವಾಗಿದ್ದ ಮೀ ಟೂ ಚಳವಳಿಯ ಬಗ್ಗೆ ಮಾತನಾಡಿದ ಕಂಗನಾ, ಈ ಅಭಿಯಾನ ಕೊನೆಗೂ ವಿಫಲವಾಯಿತು.

ಅದೆಷ್ಟೋ ರೇಪಿಸ್ಟ್ ಗಳು, ಲೈಂಗಿಕ ಕಿರುಕುಳ ನೀಡಿದವರು ಚಳವಳಿಯನ್ನು ಹತ್ತಿಕ್ಕಿದರು. ಯಾವ ಸಂತ್ರಸ್ತರಿಗೂ ನ್ಯಾಯ ಸಿಗಲಿಲ್ಲ. ಈಗ ಪಾಯಲ್ ಗೂ ಕೂಡ ಅದೇ ಅನುಭವ ಆಗುತ್ತದೆ.

ಆಕೆಗೂ ಅವಮಾನ ಮಾಡಿ, ಬಾಯಿಮುಚ್ಚಿಸಲಾಗುತ್ತದೆ ಎಂದು ಕಂಗನಾ ನೇರವಾಗಿ ಹೇಳಿದ್ದಾರೆ. ಅನುರಾಗ್ ಕಶ್ಯಪ್ ಹಲವು ಮಹಿಳೆಯರನ್ನು ತನ್ನ ಸುಖಕ್ಕಾಗಿ ಬಳಸಿಕೊಂಡಿದ್ದಾನೆ ಎಂಬುದು ನನಗೆ ಗೊತ್ತು.

ಆತ ಮದುವೆಯಾದ ಮೇಲೆಯೂ ಆ ಚಾಳಿ ಬಿಡಲಿಲ್ಲ. ಹಲವರಿಗೆ ಮೋಸ ಮಾಡಿದ್ದಾನೆ ಎಂದೂ ಆರೋಪಿಸಿದ್ದಾರೆ.

ಕೃಪೆ:ವಿ.ವಾ

Edited By : Nirmala Aralikatti
PublicNext

PublicNext

20/09/2020 10:43 pm

Cinque Terre

110.77 K

Cinque Terre

7