ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಂಡ್ತಿ ಹೆಸರಲ್ಲಿ ಪ್ರೇಯಸಿಗೆ ಕಾಲ್, ಪ್ರೇಮಕ್ಕೂ ಸಿಸಿಬಿ ನೋಟಿಸ್ ಜಾರಿ

ಬೆಂಗಳೂರು: ಚಂದನವನದ ಡ್ರಗ್ಸ್ ಜಾಲದ ಆರೋಪಿ ವೈಭವ್ ಜೈನ್ ನನ್ನು ಸಿಸಿಬಿ ಪೊಲೀಸ್ ಬಂಧಿಸಿ ವಿಚಾರಣೆ ನಡೆಸೋ ವೇಳೆ ಹೆಂಡತಿಗೆ ಫೋನ್ ಮಾಡ್ತನೆಂದು ಪ್ರೇಯಸಿಗೆ ಕಾಲ್ ಮಾಡಿ ಪೊಲೀಸ್ ಬಲೆಗೆ ಸಿಲುಕಿದ್ದಾನೆ.

ಇಂದು ನನ್ನ ಮದುವೆಯ ದಿನ ಪತ್ನಿಗೆ ಫೋನ್ ಮಾಡಿ ಶುಭಾಶಯ ತಿಳಿಸಲು ನಿಮ್ಮ ಫೋನ್ ಕೊಡಿ ಸಾರ್ ಎಂದು ಪೊಲೀಸರ ಬಳಿ ಮೊಬೈಲ್ ಕೇಳಿ ಪಡೆದು ಆರೋಪಿ ವೈಭವ್ ಜೈನ್ ಪ್ರಿಯತಮೆಗೆ ಫೋನ್ ಮಾಡಿದ್ದಾನೆ. ಆದರೆ ಮರುದಿನ ವೈಭವ್ ಪತ್ನಿ ಬಟ್ಟೆ ತೆಗೆದುಕೊಂಡು ಸಿಸಿಬಿ ಕಚೇರಿಗೆ ಬಂದಿದ್ದಾರೆ. ಈ ವೇಳೆ ಜೈನ್ ಪತ್ನಿಗೆ ಪ್ರಶ್ನಿಸಿದಾಗ “ಇಲ್ಲ ಸಾರ್, ನನಗೆ ಫೋನ್ ಮಾಡಿಲ್ಲ. ನಮ್ಮ ಮದುವೆ ವಾರ್ಷಿಕೋತ್ಸವ ಇಲ್ಲ” ಎಂದಾಗ ಪತ್ನಿಯ ಈ ಉತ್ತರದಿಂದ ಪೊಲೀಸರ ಕೈಯಲ್ಲಿ ವೈಭವ್ ಜೈನ್ ರೆಡ್‍ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ.

‘ಮಿಸ್ ಸೌತ್’ ಆಗಿದ್ದ ದಕ್ಷಿಣದ ಸುಂದರಿಯೇ ವೈಭವ್ ಲವ್ವರ್ ಎಂದು ಒಂದೇಡೆ ಹೇಳಲಾಗಿದೆ. ಜೈನ್ ಮದುವೆ ಆಗಿದ್ದರೂ ಸೌತ್ ಸುಂದರಿ ಜೊತೆಗೆ ರಿಲೇಷನ್ ಶೀಪ್ ಹೊಂದಿದ್ದ ಎನ್ನಲಾಗುತ್ತಿದೆ. ಪ್ರಿಯತಮಗೆ ವಿಚಾರದಲ್ಲಿ ವೈಭವ್ ಪತ್ನಿಯ ಜೊತೆ ಗಲಾಟೆ ಮಾಡುತ್ತಿದ್ದ ಎಂದು ಬಲ್ಲ ಮೂಲಗಳಿಂದ ತಿಳಿದಿದ್ದು ವೈಭವ್ ಜೈನ್ ಫೋನ್ ಸಂಭಾಷಣೆ ಹಿನ್ನೆಲೆಯಲ್ಲಿ ಸೌತ್ ಸುಂದರಿಗೂ ಕ್ರೈಂ ಬ್ರ್ಯಾಂಚ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

Edited By :
PublicNext

PublicNext

18/09/2020 01:52 pm

Cinque Terre

66.09 K

Cinque Terre

3

ಸಂಬಂಧಿತ ಸುದ್ದಿ