ಮುಂಬಯಿ : ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಅಪರಿಚಿತರು ಟ್ಯಾಕ್ಸಿ ಡ್ರೈವರ ಬಳಿ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ವಿಳಾಸ ಕೇಳಿದ್ದಾರೆ.ಅಪರಿಚಿತರು ಹೀಗೆ ಕೇಳುತ್ತಿದ್ದಂತೆ ಟ್ಯಾಕ್ಸಿ ಡ್ರೈವರ್ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.
ಟ್ಯಾಕ್ಸಿ ಚಾಲಕ ಮುಂಬೈ ಪೊಲೀಸರಿಗೆ ಸಂಭವನೀಯ ದಾಳಿಯ ಬಗ್ಗೆ ಸುಳಿವು ನೀಡಿದ ಬೆನ್ನಲ್ಲೇ ಅಂಬಾನಿ ಅವರ ಆಂಟಿಲಿಯಾ ಹೆಸರಿನ ಮನೆಯ ಹೊರಗೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರಕರಣದ ಸತ್ಯಾಸತ್ಯತೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಇಬ್ಬರು ಪ್ರಯಾಣಿಕರನ್ನು ಹುಡುಕಲು ತಪಾಸಣೆ ನಡೆಸಲಾಗುತ್ತಿದೆ ಎಂದಿದ್ದಾರೆ.
PublicNext
08/11/2021 07:30 pm