ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ಫೋಸಿಸ್ ವಿರುದ್ಧ ಪಾಂಚಜನ್ಯ ಗಂಭೀರ ಆರೋಪ: ನಮಗೂ ಅದಕ್ಕೂ ಸಂಬಂಧವಿಲ್ಲ ಎಂದ RSS

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖವಾಣಿ ಪಾಂಚಜನ್ಯ ಇನ್ಫೋಸಿಸ್‌ ವಿರುದ್ಧ ಆರೋಪವನ್ನು ಮಾಡಿದೆ. ಇನ್ಫೋಸಿಸ್‌ ದೇಶದ್ರೋಹಿಗಳೊಂದಿಗೆ ಸೇರಿಕೊಂಡಿದೆ. ತುಕ್ಡೆ ತುಕ್ಡೆ ಗ್ಯಾಂಗ್‌ ಜೊತೆ ಸೇರಿದೆ ಎಂದು ಆರ್‌ಎಸ್‌ಎಸ್‌ ಮುಖವಾಣಿ ಪಾಂಚಜನ್ಯ ಹೇಳಿದೆ.

ಆರ್‌ಎಸ್‌ಎಸ್‌ ಮುಖವಾಣಿಯಲ್ಲಿ ಪ್ರಕಟವಾದ ಈ ವರದಿಯನ್ನು ಹಲವಾರು ಮಂದಿ ಟೀಕೆ ಮಾಡಿದ್ದಾರೆ. ಐಟಿ ದಿಗ್ಗಜ ಇನ್ಫೋಸಿಸ್‌ ವಿರುದ್ದ ಈ ರೀತಿಯ ಆಧಾರ ರಹಿತವಾದ ಆರೋಪವನ್ನು ಮಾಡುವುದು ಸರಿಯಲ್ಲ ಎಂದು ಹಲವಾರು ಮಂದಿ ಹೇಳಿದ್ದಾರೆ. ಪಾಂಚಜನ್ಯದಲ್ಲಿ ಪ್ರಕಟವಾಗಿರುವ ವರದಿಗೆ ಸಾಕಷ್ಟು ಮಂದಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಆರ್‌ಎಸ್‌ಎಸ್‌ನ ಅಖಿಲ ಭಾರತ ಪ್ರಚಾರ ಉಸ್ತುವಾರಿ ಸುನಿಲ್ ಅಂಬೇಕರ್ ಭಾನುವಾರ ಟ್ವೀಟ್ ಮಾಡಿ, "ಭಾರತೀಯ ಕಂಪನಿಯಾಗಿ, ಇನ್ಫೋಸಿಸ್ ಭಾರತದ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದೆ. ಇನ್ಫೋಸಿಸ್ ನಿರ್ವಹಿಸುವ ಪೋರ್ಟಲ್‌ಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿರಬಹುದು. ಆದರೆ ಪಾಂಚಜನ್ಯದಲ್ಲಿ ಈ ಬಗ್ಗೆ ಪ್ರಕಟವಾದ ಲೇಖನಗಳು ಲೇಖಕರ ವೈಯಕ್ತಿಕ ದೃಷ್ಟಿಕೋನಗಳಾಗಿವೆ. ಅಲ್ಲದೇ ಪಾಂಚಜನ್ಯ ಸಂಘದ ಮುಖವಾಣಿಯಲ್ಲ. ಆದ್ದರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೂ ಈ ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಸಂಬಂಧ ಕಲ್ಪಿಸಬಾರದು" ಎಂದು ಹೇಳಿದ್ದಾರೆ.

ಪಾಂಚಜನ್ಯದಲ್ಲಿ ಪ್ರಕಟವಾದ ಲೇಖನದಲ್ಲೇನಿದೆ?

ಆರ್‌ಎಸ್‌ಎಸ್‌ನ ಸಾಪ್ತಾಹಿಕ ಪತ್ರಿಕೆ ಪಾಂಚಜನ್ಯ 'ಸಾಖ್ ಔರ್‌ ಆಘಾತ್' ಎಂಬ ಶೀರ್ಷಿಕೆಯಡಿ ಕವರ್ ಸ್ಟೋರಿ ಪ್ರಕಟಿಸಿತ್ತು. ಈ ಲೇಖನದಲ್ಲಿ ಬೆಂಗಳೂರು ಮೂಲದ ಐಟಿ ಕ್ಷೇತ್ರದ ಪ್ರಖ್ಯಾತ ಇನ್ಫೋಸಿಸ್ ಕಂಪನಿ ಭಾರತೀಯ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಉದ್ದೇಶ ಪೂರ್ವಕವಾಗಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ.. ಅಲ್ಲದೇ ಈ ಕಂಪನಿಯು ನಕ್ಸಲರು, ಎಡಪಂಥೀಯರು ಮತ್ತು ತುಕ್ಡೆ ತುಕ್ಡೆ ಗ್ಯಾಂಗ್‌ಗೆ ಸಹಾಯ ಮಾಡಿದೆ ಎಂದೂ ಆರೋಪಿಸಲಾಗಿದೆ. ಇನ್ಫೋಸಿಸ್ ಹೀಗೆ ಸರ್ಕಾರಿ ಯೋಜನೆಯಲ್ಲಿ ಎಡವಟ್ಟು ಮಾಡಿರುವುದು ಇದೇ ಮೊದಲಲ್ಲ ಎಂದೂ ದೂಷಿಸಲಾಗಿದೆ.

Edited By : Vijay Kumar
PublicNext

PublicNext

05/09/2021 09:39 pm

Cinque Terre

58.21 K

Cinque Terre

5