ಬೆಂಗಳೂರು: ಇತ್ತೀಚೆಗೆ ನಿಗೂಢವಾಗಿ ಮೃತಪಟ್ಟ ಸಿಐಡಿ ವಿಭಾಗದ ಡಿವೈಎಸ್ಪಿ ಲಕ್ಷ್ಮೀ ಅವರ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಈ ಹಿಂದೆಯೇ DySP ಲಕ್ಷ್ಮೀ ಮದ್ಯ ಸೇವಿಸುವ ಅಭ್ಯಾಸ ಹೊಂದಿದ್ದರು ಎಂದು ಹೇಳಲಾಗಿತ್ತು. ಅದರ ಬಗ್ಗೆಯೂ ಅವರ ವಿರುದ್ಧ ತನಿಖೆ ನಡೆದಿತ್ತು. ಈ ಅಭ್ಯಾಸದಿಂದ ಇಲಾಖೆಯಲ್ಲೂ ಹೆಸರು ಹಾಳಾಗಿತ್ತು. ಈಗ ಇದರ ಜೊತೆಗೆ ಮತ್ತೊಂದು ಗಂಭೀರ ಅಪರಾಧ ಮಾಡಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.
ತರಬೇತಿ ವೇಳೆ ನೀಡಿದ್ದ ಪಿಸ್ತೂಲ್ ಬ್ಯಾರೆಲ್ ಕಳೆದಿದ್ದ ಆರೋಪ ಲಕ್ಷ್ಮಿ ಮೇಲಿತ್ತು. ಪೊಲೀಸ್ ಇಲಾಖೆಯಲ್ಲಿ ಶಸ್ತ್ರಾಸ್ತ್ರ ಕಳೆದುಕೊಳ್ಳುವುದು ಗಂಭೀರ ಅಪರಾಧ. ಆದ್ದರಿಂದ ಲಕ್ಷ್ಮಿಯ ಬೇಜವಾಬ್ದಾರಿತನವನ್ನ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆ, ಈ ಬಗ್ಗೆ ವಿಚಾರಣೆ ನಡೆಸುತ್ತಿತ್ತು ಎಂದು ತಿಳಿದು ಬಂದಿದೆ. ಅಧಿಕಾರಿಯಾಗಿಯೇ ಎರಡೆರಡು ಗಂಭೀರ ವಿಚಾರಣೆಗಳನ್ನು ಲಕ್ಷ್ಮೀ ಎದುರಿಸುತ್ತಿದ್ದರು.
DySP ಲಕ್ಷ್ಮೀ ಅವರು ಪೊಲೀಸ್ ತರಬೇತಿಯಲ್ಲಿದ್ದಾಗಲೇ ಎರಡೆರಡು ಆರೋಪಕ್ಕೆ ಗುರಿಯಾಗಿದ್ದರು. ಬೆಳಗಾವಿಯಲ್ಲಿ ಪೊಲೀಸ್ ತರಬೇತಿ ಪಡೆಯುತ್ತಿದ್ದ ವೇಳೆ ಪಾನಮತ್ತರಾಗಿ ಗಲಾಟೆ ಮಾಡಿ ಇತರೆ ಮಹಿಳಾ ಅಧಿಕಾರಿಗಳ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಈ ಬಗ್ಗೆ ತನಿಖೆ ಸಹ ನಡೆದಿತ್ತು. ಹಾಗೂ ಲಕ್ಷ್ಮೀ ತನಿಖೆಯನ್ನು ಎದುರಿಸುತ್ತಿದ್ದರು. ಇದರ ಜೊತೆ ಮತ್ತೊಂದು ಅಪರಾಧ ಮಾಡಿದ್ದರು ಎಂದು ಹೇಳಲಾಗುತ್ತಿದೆ.
PublicNext
23/12/2020 11:45 am