ನವದೆಹಲಿ : ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಮಸೂದೆ ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನು ಈ ಪ್ರತಿಭಟನಾ ಸ್ಥಳದಿಂದ ಮರಳಿದ ಎರಡು ದಿನದ ಬಳಿಕ ಪಂಜಾಬ್ ಮೂಲದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಗುರ್ಲಭ್ ಸಿಂಗ್ (22) ಎಂದು ಗುರುತಿಸಲಾಗಿದೆ. ಬಟಿಂತಾ ಜಿಲ್ಲೆಯ ದಯಾಲ್ ಪುರ ಮಿರ್ಜಾ ಗ್ರಾಮದ ನಿವಾಸಿ.
ಡಿಸೆಂಬರ್ 18ರ ಶುಕ್ರವಾರದಂದು ಈತ ಪ್ರತಿಭಟನೆಯಿಂದ ಗ್ರಾಮಕ್ಕೆ ವಾಪಸ್ಸಾಗಿದ್ದನು. ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿ ಸಿಂಗ್ ಕೆಲವು ವಿಷಕಾರಿ ಪದಾರ್ಥಗಳನ್ನು ಸೇವಿಸಿದ್ದಾನೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಸಿಂಗ್ ಬದುಕುಳಿದಿಲ್ಲ.
ಆತ್ಮಹತ್ಯೆಗೆ ಇನ್ನು ನಿಕರವಾದ ಕಾರಣ ತಿಳಿದು ಬಂದಿಲ್ಲ.
ಆದರೆ ಸಿಂಗ್ ಸಣ್ಣ ಮಟ್ಟದ ಕೃಷಿಕನಾಗಿದ್ದು, 6 ಲಕ್ಷ ರೂ. ಸಾಲ ಮಾಡಿದ್ದನು ಎಂದು ಪೊಲೀಸರು ಹೇಳಿದ್ದಾರೆ.
PublicNext
21/12/2020 02:03 pm