ಜೈಪುರ : ಶಿಕ್ಷಕರು ಮಕ್ಕಳಿಗೆ ತಿದ್ದಿ ಬುದ್ದಿ ಹೇಳಿ ಸನ್ಮಾರ್ಗದಲ್ಲಿ ನಡೆಸಬೇಕು ಆದ್ರೆ ಇಲ್ಲೊಬ್ಬ ಕಾಮುಕ ಶಿಕ್ಷಕನ ನಡೆ ನಿಜಕ್ಕೂ ತಲೆತಗ್ಗಿಸುವಂತಿದೆ.
ಹೌದು ನನ್ನ ಜೊತೆ ಸೆಕ್ಸ್ ಮಾಡಿದ್ರೆ ನಾನು ಮಾರ್ಕ್ಸ್ ಕೊಡುತ್ತೇನೆ ಎಂದು ಶಾಲಾ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರಿಗೆ ಹೇಳಿರುವ ಘಟನೆ ರಾಜಸ್ಥಾನದ ನೀಮ್ರಾನಾದಲ್ಲಿ ನಡೆದಿದೆ.
ಸರ್ಕಾರಿ ಶಾಲಾ ಶಿಕ್ಷಕ ಪ್ರಕಾಶ್ ಯಾದವ್(45) ಆರೋಪ ಎದುರಿಸುತ್ತಿರುವ ಶಿಕ್ಷಕನಾಗಿದ್ದಾನೆ. ಮೇಲಾಧಿಕಾರಿಗೆ ವಿದ್ಯಾರ್ಥಿನಿಯರು ಶಿಕ್ಷಕ ದುಷ್ಟತನದ ಬಗ್ಗೆ ತಿಳಿಸಿದ್ದಾರೆ. ಇದೀಗ ಆರೋಪಿ ಶಿಕ್ಷಕ ಅರೆಸ್ಟ್ ಆಗಿದ್ದಾನೆ.
ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಈತ ಒಳ್ಳೆ ಅಂಕ ಬೇಕಾದರೆ ನನ್ನ ಜೊತೆ ದೈಹಿಕ ಸಂಪರ್ಕ ಬೆಳಸಿ ಎಂದು ಹೇಳುತ್ತಿದ್ದನಂತೆ. ವಿದ್ಯಾರ್ಥಿನಿಯರು ಶಿಕ್ಷಕನ ವರ್ತನೆಯಿಂದ ಮನನೊಂದಿದ್ದರು.
ದುರುಳ ಶಿಕ್ಷಕ ಸದ್ಯ ಕಂಬಿ ಹಿಂದೆ ಸರಿದಿದ್ದಾನೆ.
PublicNext
21/12/2020 11:47 am