ಮುಂಬೈ: ವೈದ್ಯೋ ನಾರಾಯಣೋ ಹರಿಃ" ಎನ್ನುವ ಮಾತಿದೆ. ವೈದ್ಯರನ್ನು ಸಾಕ್ಷಾತ್ ಭಗವಂತನ ಸ್ವರೂಪ ಎನ್ನಲಾಗುತ್ತದೆ. ಆದರೆ ಮಹಾರಾಷ್ಟ್ರದ ವೈದ್ಯರೊಬ್ಬರು ಇದಕ್ಕೆ ಕಳಂಕ ತರುವ ಕೆಲಸ ಮಾಡಿರುವ ಆರೋಪ ಕೇಳಿ ಬಂದಿದೆ.
ಪುಣೆಯ ಪ್ರಕೃತಿ ಚಿಕಿತ್ಸಾ ವೈದ್ಯ ಧನಂಜಯ್ ಗೊಂಡ್ರಾಸ್, ನಿಮಗೆ ಲಿವರ್ (ಪಿತ್ತಜನಕಾಂಗ) ಸಂಬಂಧಿ ಕಾಯಿಲೆ ಮತ್ತು ಕ್ಯಾನ್ಸರ್ ಇದೆ ಎಂದು ಸುಳ್ಳು ಹೇಳಿ 58 ವರ್ಷದ ಸುಷ್ಮಾ ಜಾಧವ್ ಅವರಿಗೆ 1.47 ಕೋಟಿ ರೂ. ವಂಚಿಸಿದ್ದಾರೆ. ಈ ಸಂಬಂಧ ಸುಷ್ಮಾ ಜಾಧವ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಭೋಲೆನಾಥ್ ಅಹಿವಾಲೆ, "ಆರೋಪಿಯನ್ನು ಇನ್ನೂ ಬಂಧಿಸಲಾಗಿಲ್ಲ. ಆದರೆ ಸಂತ್ರಸ್ತ ಮಹಿಳೆಯ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಲಾಗುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ.
PublicNext
20/12/2020 03:07 pm