ಅಲಿಘಡ : ಓ ಮೈ ಗಾಡ್ ಇಂತಹ ಸ್ನೇಹಿತರು ಇರುತ್ತಾರೆ ಅಂದ್ರೆ ನೀವು ನಂಬಲೇ ಬೇಕು ಎಣ್ಣೆ ಪಾರ್ಟಿ ಕೊಡುವ ವಿಷಯದಲ್ಲಿ ಕೊಂಚ ಯಾಮಾರಿದ್ರೆ ಯಮಪುರಿಗೆ ಟಿಕೇಟ್ ಕೊಟ್ಟು ಬಿಡುತ್ತಾರೆ ಹುಷಾರ್..
ಹೌದು ಮದುವೆ ಆಗಿದ್ದ ಖುಷಿಗೆ ಎಣ್ಣೆ ಪಾರ್ಟಿ ಕೊಡಲಿಲ್ಲ ಎಂದು ಸ್ನೇಹಿತನನ್ನೇ ಕೊಂದಿರುವ ಘಟನೆ ಉತ್ತರ ಪ್ರದೇಶದ ಅಲಿಘಡದ ಪಲಿಮುಕಿಮ್ ಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೃತ ಸಂತ್ರಸ್ತನನ್ನು 28 ವರ್ಷದ ಬಬ್ಲು ಸೂರ್ಯವಂಶಿ ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ ಪಶು ವ್ಯಾಪಾರಿಯಾಗಿದ್ದ ಬಬ್ಲು ಮದುವೆಯ ಬಳಿಕ ಪತ್ನಿಯನ್ನು ಮನೆಗೆ ಕರೆ ತಂದಿದ್ದನು.
ವಧು ಬಂದ ಮರುದಿನ ಬಬ್ಲು ಗೆಳೆಯನ ಮನೆಗೆ ಹೋಗಿದ್ದಾನೆ.
ನಾಲ್ವರು ಗೆಳೆಯರು ಮದುವೆಯಾದ ಖುಷಿಗೆ ಮದ್ಯದ ಪಾರ್ಟಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಅದಾಗಲೇ ಮದ್ಯದ ನಷೆಯಲ್ಲಿದ್ದ ಸ್ನೇಹಿತರನ್ನು ಕಂಡ ಬಬ್ಲು ಮತ್ತೆ ಮದ್ಯ ತಂದು ಕೊಡಲು ನಿರಾಕರಿಸಿದ್ದಾನೆ.
ಬಬ್ಲು ಪಾರ್ಟಿ ನೀಡಲು ಒಪ್ಪದಿದ್ದಾಗ ಗೆಳೆಯರ ನಡುವೆ ಗಲಾಟೆ ಆರಂಭವಾಗಿ ಗೆಳೆಯರೆಲ್ಲರೂ ಸೇರಿ ಚಾಕುವಿನಿಂದ ಬಬ್ಲುವಿನ ಕತ್ತು ಕೊಯ್ದು ಎಸ್ಕೇಪ್ ಆಗಿದ್ದಾರೆ.
ನಂತರ ಬಬ್ಲು ಕುಟುಂಬಸ್ಥರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿದ ಕುಟುಂಬಸ್ಥರು ಬಬ್ಲುನನ್ನು ಅಲಿಗಢ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಷ್ಟರಲ್ಲಿ ಬಬ್ಲುವಿನ ಪ್ರಾಣ ಪಕ್ಷಿ ಹಾರಿ ಹೋಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಿ ಪರಾರಿಯಾಗಿದ್ದ ಪ್ರಮುಖ ಆರೋಪಿ ರಾಮ್ ಖಿಲಾಡಿ ಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಪರಾರಿಯಾಗಿರುವ ನಾಲ್ವರಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಸಿಐ ನರೇಶ್ ಸಿಂಗ್ ಹೇಳಿದ್ದಾರೆ.
PublicNext
16/12/2020 07:15 pm