ಬೆಂಗಳೂರು: ಆಕೆಗೆ ಈಗಾಗಲೇ 2ಮದುವೆ ಆಗಿ ಡಿವೋರ್ಸ್ ಕೂಡ ಆಗಿದೆ. ನಂತರ ಮೂರನೆಯವನೊಂದಿಗೆ ಲವ್ ಅಫೇರ್ ಶುರುವಾಗಿದೆ. ಆತನನ್ನ ಮೆಚ್ಚಿಸಲು ಆಕೆ ತನ್ನ ಸ್ನಾನದ ವಿಡಿಯೋ ಕಳಿಸುತ್ತಿದ್ದಳು. ಇದನ್ನೆಲ್ಲ ನೋಡಿ ಪುಕ್ಕಟ್ಟೆ ಮಜಾ ತೆಗೆದುಕೊಳ್ಳುತ್ತಿದ್ದ ಆತ ಇದೇ ರೀತಿ ಬೇರೆ ಹುಡುಗಿಯರ ಸ್ನಾನದ ವಿಡಿಯೋ ಕಳುಹಿಸಲು ಕೇಳುತ್ತಿದ್ದ. ಹೇಗೋ ಏನೋ ವಿಷಯ ಪೊಲೀಸರಿಗೆ ತಿಳಿದಿದೆ. ಪೊಲೀಸರು ಈಗ ಇಬ್ಬರನ್ನೂ ಅರೆಸ್ಟ್ ಮಾಡಿ ಸರಿಯಾಗಿ ರುಬ್ಬಿದ್ದಾರೆ.
ಅಷ್ಟಕ್ಕೂ ಗುಪ್ತವಾಗಿ ನಡೆಯುತ್ತಿದ್ದ ಈ ಮನೆಹಾಳು ಕೆಲಸ ಪೊಲೀಸರಿಗೆ ಗೊತ್ತಾಗಿದ್ದಾದ್ರೂ ಹೇಗೆ ಅಂತೀರಾ? ಮುಂದೆ ಓದಿ
ನರ್ಸ್ ಕೆಲಸ ಮಾಡುತ್ತಿದ್ದ ಅಶ್ವಿನಿ ಎಂಬಾಕೆ ಮಾಡಿದ ಘನಂದಾರಿ ಕೆಲಸ ಇದು. ಈಕೆ ಹಿಂದೆ ಎರಡು ಮದುವೆಯಾಗಿ ಇಬ್ಬರಿಗೂ ವಿಚ್ಛೇದನ ಕೊಟ್ಟಿದ್ದಾಳೆ. ನಂತರ ಚೆನ್ನೈನ ಪ್ರತಿಷ್ಠಿತ ಹೊಟೇಲ್ ಒಂದರಲ್ಲಿ ಬಾಣಸಿಗ ಕೆಲಸ ಮಾಡುವ ಪ್ರಭು ಎಂಬಾತನೊಂದಿಗೆ ಕಾಂಟ್ಯಾಕ್ಟ್ ಬೆಳೆದಿದೆ. ಆತನೊಂದಿಗೆ ಪ್ರೇಮಾಂಕುರವೂ ಆಗಿದೆ. ಆರಂಭದಲ್ಲಿ ಲವ್ ಚಾಟ್ ನಡೆದಿತ್ತು. ಆ ನಂತರ ಅದು ಸೆಕ್ಸ್ ಚಾಟ್ ಆಗಿ ಕನ್ವರ್ಟ್ ಆಗಿದೆ.
ಇಷ್ಟೆಲ್ಲ ಆದ ಮೇಲೆ ಆತ, ನಿನ್ನ ಸ್ನಾನದ ವಿಡಿಯೋ ಕಳುಹಿಸು ಅಂತ ಕೇಳಿದ್ದಾನೆ ಎನ್ನಲಾಗಿದೆ. ಅದರಂತೆ ತನ್ನ ಪ್ರಿಯಕರನನ್ನು ತಣಿಸಲು ಅಶ್ವಿನಿ, ಸ್ನಾನದ ವಿಡಿಯೋಗಳನ್ನು ಶೇರ್ ಮಾಡಿದ್ದಾಳೆ. ಅಷ್ಟಕ್ಕೆ ತೃಪ್ತನಾಗದ ಪೋಲಿ ಬಾಯ್ ಫ್ರೆಂಡ್ ಪ್ರಭು, ಸ್ನೇಹಿತೆಯರ ಸ್ನಾನದ ವಿಡಿಯೋ ಕಳಿಸುವಂತೆ ಕೇಳಿದ್ದಾನೆ. ಇದೇ ಹುಚ್ಚು ಹಿಡಿಸಿಕೊಂಡ ಆಕೆ ತಾನಿದ್ದ ಹಾಸ್ಟೆಲ್ಲಿನ ಬಾತ್ ರೂಮ್ ನಲ್ಲಿ ಗುಪ್ತವಾಗಿ ಮೊಬೈಲ್ ಇಟ್ಟು ಚಿತ್ರೀಕರಿಸಿ ತನ್ನವನಿಗೆ ಕಳಿಸಿದ್ದಾಳೆ.
ಇದೇ ಕೃತ್ಯ ನಡೆಯುತ್ತಿರುವಾಗ ಅಶ್ವಿನಿಯ ಸಹೋದ್ಯೋಗೆ ಬಾತ್ ರೂಮ್ ನಲ್ಲಿ ಮೊಬೈಲ್ ಇದ್ದದ್ದು ಕಂಡಿದೆ. ಪರಿಶೀಲಿಸಿದಾಗ ಅದರಲ್ಲಿ ವಿಡಿಯೋ ರೆಕಾರ್ಡ್ ಆಗುತ್ತಿರುವುದು ಗೊತ್ತಾಗಿದೆ. ಅದೇ ಫೋನಿನ ಗ್ಯಾಲರಿ ನೋಡಿದಾಗ ಅದರಲ್ಲಿ ಅದೇ ಹಾಸ್ಟೆಲ್ ನ ಇತರ ಯುವತಿಯ ಸ್ನಾನದ ವಿಡಿಯೋ ಕೂಡ ಪತ್ತೆಯಾಗಿದೆ. ಕೂಡಲೇ ಆ ಯುವತಿ ಪೊಲೀಸರಿಗೆ ಈ ವಿಷಯ ತಿಳಿಸಿದ್ದಾಳೆ.
ನಂತರ ಪೊಲೀಸರು ಹಾದಿಬಿಟ್ಟ ಈ ಜೋಡಿಹಕ್ಕಿಗಳನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಇಬ್ಬರ ಮೊಬೈಲ್ ಫೋನ್ ವಶಪಡಿಸಿಕೊಂಡು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪಾಗಲ್ ಪ್ರೇಮಿಗಳು ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
PublicNext
15/12/2020 01:00 pm