ಬೆಂಗಳೂರು- ನಟಿ ಸಂಜನಾ ಗಲ್ರಾನಿ ಅವರನ್ನು ಒತ್ತಾಯದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಮೌಲ್ವಿಯೊಬ್ಬರ ಮೇಲೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನ್ಯಾಯವಾದಿ ಅಮೃತೇಶ್ ಎಂಬುವವರು ಈ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಟ್ಯಾನರಿ ರಸ್ತೆ ನಿವಾಸಿ ಉಲುಮ್ ಶಾ ವಲಿಯಲ್ಲಾ ಮದರಸಾದ ಮೌಲ್ವಿಯೊಬ್ಬರು ಸಂಜನಾ ಅವರನ್ನು ಒತ್ತಾಯದಿಂದ ಮತಾಂತರ ಮಾಡಿದ್ದಾರೆ. ಸಂಜನಾ ಹೆಸರನ್ನು ಮಹಿರಾ ಎಂದು ಬದಲಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು ಈ ಬಗ್ಗೆ ಸಲಹೆ ಪಡೆಯಲು ಕಾನೂನು ತಜ್ಞರನ್ನು ಸಂಪರ್ಕಿಸಿದ್ದಾರೆ.
PublicNext
14/12/2020 10:13 am