ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈ ಮೇಲಿನ ಭಯೋತ್ಪಾದಕ ದಾಳಿಗೆ 12 ವರ್ಷ

ಮುಂಬಯಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ 2008ರ ನವೆಂಬರ್‌ 26ರ ಮುಂಬಯಿ ಭಯೋತ್ಪಾದಕ ದಾಳಿಗೆ ಇಂದಿಗೆ 12 ವರ್ಷ ಗತಿಸಿದೆ. ಈ ಹಿನ್ನಲೆಯಲ್ಲಿ ಅಸುನೀಗಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವನ್ನು ಪೊಲೀಸ್‌ ಇಲಾಖೆ ಆಯೋಜಿಸಿದೆ.

ಪಾಕ್‌ ಮೂಲದ ಲಷ್ಕರೆ ತಯ್ಬಾ ಸಂಘಟನೆಯ 10 ಉಗ್ರರು ಮುಂಬಯಿನ ಹಲವು ಕಡೆ ಸರಣಿ ದಾಳಿ ನಡೆಸಿ 166 ಜನರ ಮಾರಣಹೋಮ ನಡೆಸಿದ್ದರು. ದಕ್ಷಿಣ ಮುಂಬಯಿಯಲ್ಲಿನಿರ್ಮಿಸಲಾಗಿರುವ ಪೊಲೀಸ್‌ ಇಲಾಖೆಯ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಶ್ರದ್ಧಾಂಜಲಿ ಕಾರ‍್ಯಕ್ರಮದಲ್ಲಿ ಹುತಾತ್ಮ ಪೊಲೀಸರು ಹಾಗೂ ಯೋಧರ ಕುಟುಂಬ ಸದಸ್ಯರು ಭಾಗಿಯಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.

ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಸೇರಿ ಹಲವು ಗಣ್ಯರಿಂದ ಗೌರವ ಸಮರ್ಪಣೆ ಕಾರ್ಯವು ನಡೆಯಲಿದೆ.

Edited By : Nagaraj Tulugeri
PublicNext

PublicNext

26/11/2020 08:59 am

Cinque Terre

102 K

Cinque Terre

1