ಭೋಪಾಲ್: ಯುವತಿಯನ್ನು ಚುಡಾಯಿಸಿದ ಇಬ್ಬರಿಗೆ ನಡು ರಸ್ತೆಯಲ್ಲೇ ಬಸ್ಕಿ ಶಿಕ್ಷೆ ವಿಧಿಸಿದ ಪ್ರಸಂಗ ಮಧ್ಯಪ್ರದೇಶದ ದೇವಾಸ್ ನಗರದಲ್ಲಿ ನಡೆದಿದೆ.
ಇಬ್ಬರು ಮಹಿಳಾ ಪೊಲೀಸರು ಸೇರಿದಂತೆ ಒಟ್ಟು ಐವರು ಸುತ್ತುವರಿದು ಆರೋಪಿಗಳಿಂದ ಬಸ್ಕಿ ಹೊಡೆಸಿದ್ದಾರೆ. ಅಷ್ಟೇ ಅಲ್ಲದೆ ರಸ್ತೆಯುದ್ದಕ್ಕೂ ಆರೋಪಿಗಳನ್ನು ಥಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರೋಪಿಗಳು ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ದೂರು ಬಂದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗೆ ಭರ್ಜರಿ ಬಿಸಿ ಮುಟ್ಟಿಸಿದ್ದಾರೆ.
PublicNext
22/11/2020 08:41 am