ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ಯಾಂಕ್ ಸಿಬ್ಬಂದಿ ಎಂದು ಹೇಳಿ ವಂಚನೆ

ಮಂಗಳೂರು:ನವೆಂಬರ್ 17 ರ ಮಂಗಳವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡ ಇಬ್ಬರು ಖದೀಮರು ಜನರಿಂದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಿವರವನ್ನು ಪಡೆದು 1.53 ಲಕ್ಷ ರೂ ಹಣವನ್ನು ಲಪಟಾಯಿಸಿದ್ದಾರೆ

ಇಲ್ಲಿನ ಪಾಂಡೇಶ್ವರ ವ್ಯಕ್ತಿಯೊಬ್ಬರಿಗೆ ನವೆಂಬರ್ 17 ರಂದು ಮೊಬೈಲ್‌ಗೆ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ನಾನು ಎಸ್‌ಬಿಐ ಕ್ರೆಡಿಟ್ ಕಾರ್ಡ್ ವಿಭಾಗದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಕಾರ್ಡ್‌ನ್ನು ಪುನಃ ಸಕ್ರಿಯಗೊಳಿಸಲು ಕ್ರೆಡಿಟ್ ಕಾರ್ಡ್ ಸಂಖ್ಯೆ, ಒಟಿಪಿ ಬಗ್ಗೆ ಮಾಹಿತಿ ನೀಡುವಂತೆ ಹೇಳಿದ್ದಾನೆ, ಈ ವ್ಯಕ್ತಿ ಆತ ಕೇಳಿದ ಎಲ್ಲಾ ಮಾಹಿತಿಗಳನ್ನು ನೀಡಿದ್ದರು. ಕೂಡಲೇ ವ್ಯಕ್ತಿಯ ಖಾತೆಯಿಂದ 80,000 ರೂ. ಕಡಿತಗೊಂಡಿದೆ.

ಇನ್ನೊಂದು ಘಟನೆಯಲ್ಲಿ ಮುಲ್ಕಿಯ ವ್ಯಕ್ತಿಯೊಬ್ಬರಿಗೆ ಕರೆ ಬಂದಿದ್ದು ತಾವು ಬ್ಯಾಂಕ್ ಆಫ್ ಬರೋಡಾದವರು. ವಿಜಯ ಬ್ಯಾಂಕ್ ಡೆಬಿಟ್ ಕಾರ್ಡ್ ಅನ್ನು ಬ್ಯಾಂಕ್ ಆಫ್ ಬರೋಡಾಕ್ಕೆ ವರ್ಗಾಯಿಸಲು ನಿಮ್ಮ ಕಾರ್ಡ್‌ನ ಮಾಹಿತಿ ಕೊಡಿ ಎಂದು ಕೇಳಿದ್ದಾರೆ. ಖಾತೆದಾರ ಮಾಹಿತಿ ನೀಡುತ್ತಿದ್ದಂತೆ ಡೆಬಿಟ್ ಕಾರ್ಡ್ ಮತ್ತು ಸಿವಿವಿ ಸಂಖ್ಯೆ ಇತ್ಯಾದಿಗಳನ್ನು ಸಂಗ್ರಹಿಸಿ ಹಂತ ಹಂತವಾಗಿ 73,182 ರೂ. ಗಳನ್ನು ಎಗರಿಸಿದ್ದಾರೆ.

ವಂಚನೆಗೊಳಗಾಗಿ ಹಣ ಕಳೆದುಕೊಂಡವರು ಈಗ ಪೊಲೀಸರ ಮೊರೆ ಹೋಗಿದ್ದಾರೆ.

Edited By : Nagaraj Tulugeri
PublicNext

PublicNext

19/11/2020 09:04 pm

Cinque Terre

131.15 K

Cinque Terre

0