ವಾಷಿಂಗ್ಟನ್- ಐಸಿಸ್ ಭಯೋತ್ಪಾದಕ ಸಂಘಟನೆ ಉಗಮಕ್ಕೂ ಮುನ್ನ ಜಾಗತಿಕ ಮಟ್ಟದಲ್ಲಿ ಕುಖ್ಯಾತಿ ಹೊಂದಿದ್ದ ಅಲ್ ಖೈದಾ ನಾಯಕ ಅಬ್ದುಲ್ಲಾ ಅಹಮದ್ ಅಬ್ದುಲ್ಲಾ (58) ರಹಸ್ಯ ಕಾರ್ಯಾಚರಣೆಯೊಂದರಲ್ಲಿ ಸಾವನ್ನಪ್ಪಿದ್ದಾನೆ ಎಂಬ ವಿಷಯ ಈಗ ಬೆಳಕಿಗೆ ಬಂದಿದೆ.
3 ತಿಂಗಳ ಹಿಂದೆ ನಡೆದ ಕಾರ್ಯಾಚರಣೆಯಲ್ಲಿ ಈತ ಹತನಾಗಿದ್ದಾನೆ. ಅಬು ಮಹಮ್ಮದ್ ಅಲ್ ಮಸ್ರಿ ಎಂಬ ಹೆಸರಿನಿಂದಲೂ ಗುರುತಿಸಿಕೊಂಡಿದ್ದ ಈತ 1998ರಲ್ಲಿ 224 ಜನರನ್ನು ಬಲಿ ಪಡೆದಿದ್ದ ಆಪ್ರಿಕಾ ಮತ್ತು ಕೀನ್ಯಾದ ಅಮೆರಿಕ ರಾಯಭಾರ ಕಚೇರಿಗಳ ಮೇಲೆ ದಾಳಿಯಲ್ಲಿ ಈತ ಪ್ರಮುಖ ಸಂಚುಕೋರನಾಗಿದ್ದ. ಅಂದಿನಿಂದಲೂ ಈತನ ಪತ್ತೆಗೆ ಅಮೆರಿಕ ಪ್ರಯತ್ನಿಸುತ್ತಿತ್ತು. ಹಾಗೂ ಆತನ ಸುಳಿವು ನೀಡಿದವರಿಗೆ ₹ 75 ಕೋಟಿ ಬಹುಮಾನ ನೀಡೋದಾಗಿ ಘೋಷಿಸಿತ್ತು.
ಕಳೆದ ಮೂರು ತಿಂಗಳ ಹಿಂದೆ ಈತ ತನ್ನ ಪುತ್ರಿಯೊಂದಿಗೆ ಟೆಹ್ರಾನ್ ನ ರಸ್ತೆಯೊಂದರಲ್ಲಿ ಸಾಗುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ದಾಳಿಕೋರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಆತನ ಪುತ್ರಿ ಮಿರಿಯಂ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಅಮೆರಿಕದ ಸೂಚನೆ ಮೇರೆಗೆ ಇಸ್ರೇಲ್ ಗೆ ಸೇರಿದ ವ್ಯಕ್ತಿಗಳು ಈ ದಾಳಿ ನಡೆಸಿದ್ದಾರೆ. ಎಂಬ ವಿಷಯವನ್ನು ಅಮೆರಿಕ ಗುಪ್ತಚರ ಇಲಾಖೆಯ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
PublicNext
15/11/2020 10:38 am