ಬೆಂಗಳೂರು: ತಂದೆಯೋರ್ವ ತನ್ನ ಮೂವರು ಮಕ್ಕಳನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಮೈಕೋ ಲೇಔಟ್ನ ರಮಣಿಶ್ರೀ ಎಂಕ್ಲೇವ್ ಬಳಿ ನಡೆದಿದೆ.
ರಮಣಿಶ್ರೀ ಎಂಕ್ಲೇವ್ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಜನಕರಾಜ್ ಬಿಸ್ತಾ (32) ಮಕ್ಕಳಾದ ಸರಸ್ವತಿ (14 ), ಹೇಮಂತಿ (9) ಮತ್ತು ರಾಜಕುಮಾರ್ (3)ರನ್ನ ಹತ್ಯೆಗೈದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಲ್ವರ ಮೃತ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
PublicNext
13/11/2020 06:05 pm