ತುಮಕೂರು: ಪಾವಗಡ ತಾಲೂಕಿನ ವೀರಮ್ಮನಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಗುಲಿ ಗ್ರಾಮ ಪಂಚಾಯತ್ ನೌಕರ ಸೋಮವಾರ ಮೃತಪಟ್ಟಿದ್ದಾರೆ.
ಪಳವಳ್ಳಿ ಗ್ರಾಮ ಪಂಚಾಯಿತಿ ನೌಕರ ವೀರಮ್ಮನ ಹಳ್ಳಿ ಗ್ರಾಮದ ನಿವಾಸಿ ನೀರುಗಂಟಿ ಈರಣ್ಣ(58) ಮೃತಪಟ್ಟ ದುರ್ದೈವಿ ಯಾಗಿದ್ದು,ಇಂದು ಬೆಳಿಗ್ಗೆ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಸಲುವಾಗಿ ಮೋಟಾರ್ ಚಾಲನೆ ಮಾಡಲು ಹೋದಾಗ ಈ ಘಟನೆ ಸಂಭವಿಸಿದ್ದು, ರಾತ್ರಿ ಸುರಿದ ಮಳೆಯಿಂದಾಗಿ ವಯರ್ ಹಾಗೂ ಇತರ ವಿದ್ಯುತ್ ಸಲಕರಣೆಗಳಿಗೆ ನೀರು ಬಿದ್ದಿರಬಹುದು ಸ್ಥಳಿಯರು ಹೇಳುತ್ತಿದ್ದು, ಪಾವಗಡ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
PublicNext
01/08/2022 12:32 pm