ತುಮಕೂರು: ಕಳೆದ ಎರಡು ದಿನಗಳ ಹಿಂದೆ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದ ಆಟೋ ಚಾಲಕನ ಶವ ಸೋಮವಾರ ಪತ್ತೆಯಾಗಿದೆ ತುಮಕೂರಿನ ಭೀಮಸಂದ್ರ ಬಳಿ ಅಮ್ಜದ್(45) ಮೃತದೇಹ ಸಿಕ್ಕಿದೆ. ಎನ್‌ಡಿಆರ್‌ಎಫ್ ತಂಡ 2 ದಿನದಿಂದ ಕಾರ್ಯಾಚರಣೆ ನಡೆಸುತ್ತಿತ್ತು. ಸದ್ಯ ಈಗ ಮೃತ ದೇಹ ಪತ್ತೆಯಾಗಿದೆ.
ಶನಿವಾರ ಸುರಿದ ಭಾರಿ ಮಳೆಯಿಂದಾಗಿ ರಾಜಾಕಾಲುವೆ ತುಂಬಿ ಹರಿಯುತ್ತಿತ್ತು. ಹರಿಯುವ ನೀರನ್ನ ನೋಡಲು ಹೋಗಿದ್ದಾಗ ಆಟೋ ಚಾಲಕ ಅಮ್ಜದ್ ಕೊಚ್ಚಿ ಹೋಗಿದ್ದರು, ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆ ಬಳಿಕ ತುಮಕೂರು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಅವರಿಂದ ಸಂಪೂರ್ಣ ಮಾಹಿತಿ ಪಡೆದಿದ್ದರು.ನಿರಂತರವಾಗಿ ಎನ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ ನಡೆಸುತ್ತಿತ್ತು. ಸದ್ಯ ಸತತ 2 ದಿನಗಳ ಕಾರ್ಯಾಚರಣೆ ಬಳಿಕ ಅಮ್ಜದ್ ಮೃತ ದೇಹ ಭೀಮಸಂದ್ರ ಬಳಿ ಪತ್ತೆಯಾಗಿದೆ.
ಅಮ್ಜದ್ ಖಾನ್ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ:-ಇನ್ನು ಅಮ್ಜದ್ ಖಾನ್ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಡಿಸಿಗೆ ಆರಗ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ನಿರ್ದೇಶನ ನೀಡಿದ್ದಾರೆ.
ಮೃತರ ಕುಟುಂಬದ ಆಕ್ರಂದನ ಮುಗಿಲುಮುಟ್ಟಿತ್ತು.
PublicNext
18/07/2022 06:20 pm