ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾರಾಯಣಪುರ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ನಾಲ್ವರು ದಾರುಣ ಸಾವು

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರು ಗ್ರಾಮದ ಬಳಿ ನಾರಾಯಣಪುರ ಡ್ಯಾಂ ಹಿನ್ನೀರಿನಲ್ಲಿ ಒಬ್ಬನ ಶವ ಪತ್ತೆಗಾಗಿ ತೆರಳಿದ ಮೂವರು ನೀರು ಪಾಲಾದ ದಾರುಣ ಘಟನೆ ನಡೆದಿದೆ.

ಹೌದು, ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಹರನಾಳಕ್ಕೆ ಸೇರಿದ್ದ ಮಾನಸಿಕ ಅಸ್ವಸ್ಥನಾಗಿದ್ದ ಶಿವಪ್ಪ ಅಮಲೂರು ನದಿಯಲ್ಲಿ ಮುಳುಗಿದ್ದ. ಆತನ ಶಿವಪ್ಪನ ಮೃತದೇಹ ಹುಡುಕಲು ತೆರಳಿದ್ದಾಗ ವಿದ್ಯುತ್‌ ತಗುಲಿ ಶಿವಪ್ಪ ಅಮಲೂರು ಪುತ್ರ ಯಮನಪ್ಪ ಅಮಲೂರು(30), ಶಿವಪ್ಪ ಅಮಲೂರು ಅಳಿಯ ಶರಣಗೌಡ ಬಿರಾದರ್‌ (30), ಬೋಟ್‌ ಆಪರೇಟರ್ ಪರಶು ಎನ್ನುವವರು ಮೃತಪಟ್ಟಿದ್ದಾರೆ. ಇನ್ನು ಅದೃಷ್ಟವಶಾತ್ ಬೋಟ್‌ನಲ್ಲಿದ್ದ ಇತರೆ 8 ಜನರು ಪಾರಾಗಿದ್ದಾರೆ.

ಸದ್ಯ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಕಾರ್ಯಾಚರಣೆಯಲ್ಲಿ ತೊಡಗಿದೆ. ಇನ್ನು ಹುನಗುಂದ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

07/10/2021 05:43 pm

Cinque Terre

62.81 K

Cinque Terre

0

ಸಂಬಂಧಿತ ಸುದ್ದಿ