ಆನೇಕಲ್: ರಾಂಗ್ ರೂಟ್‌ನಲ್ಲಿ ಬಂದ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ಭೀಕರ ಅಪಘಾತ ತಮಿಳುನಾಡಿನ ಹೊಸೂರು ಬಳಿಯ ಸೂಳಗಿರಿಯಲ್ಲಿ ನಡೆದಿದೆ.
ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡು ಹೊಸೂರು ಸಮೀಪದ ಸೂಳಗಿರಿ ಎಚ್.ಪಿ ಪೆಟ್ರೋಲ್ ಬಂಕ್ ಎದುರು ಅಪಘಾತ ಸಂಭವಿಸಿದೆ. ಎರಡೂ ಕಾರುಗಳ ಚಾಲಕರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ವೈಯಾಲಿಕಾವಲ್ ನಿವಾಸಿ ಸುಮಂತ್ (21) ಮತ್ತು ಕೋರಮಂಗಲ ನಿವಾಸಿ ವಿನ್ಸೆಂಟ್ ಗೋಪಿ (34) ಮೃತ ದುರ್ದೈವಿಗಳು. ಹೈವೇಯಲ್ಲಿ ಬರುತ್ತಿದ್ದ ಇಂಡಿಕಾ ಕಾರಿಗೆ ರಾಂಗ್ ರೂಟ್‌ನಲ್ಲಿ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಸೂಳಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
PublicNext
26/09/2021 11:39 am