ಹಾಸನ: ಆಟೋ ಮತ್ತು ಕಾರು ಮಧ್ಯೆ ಭೀಕರ ಅಪಘಾತ ಸಂಭವಿಸಿ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಕಾಮಸಮುದ್ರದ ಬಳಿ ನಡೆದಿದೆ.
ಮೃತ ದುರ್ದೈವಿ ಆಟೋ ಚಾಲಕ ಹೊಳೆನರಸಿಪುರದ ಬೈಚನಹಳ್ಳಿ ಗ್ರಾಮದವನು ಎನ್ನಲಾಗಿದೆ. ಅಪಘಾತದಲ್ಲಿ ಕಾರು ಮತ್ತು ಆಟೋ ಸಂಪೂರ್ಣ ಜಖಂಗೊಂಡಿವೆ. ಹೊಳೆನರಸಿಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
21/09/2021 12:12 pm