ಚಂಡೀಗರ್: ಇತ್ತೀಚೆಗೆ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಜಾಗತಿಕ ವಿಶ್ವವಿದ್ಯಾಲಯಗಳ ಡಬಲ್ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ನಮನ್ವೀರ್ ಕಂಚಿನ ಪದಕ ಗೆದ್ದಿದ್ದ, ರಾಷ್ಟ್ರೀಯ ಮಟ್ಟದ ಶೂಟರ್ ಕ್ರೀಡಾಪಟು ನಮನ್ವೀರ್ ಸಿಂಗ್ ಬ್ರಾರ್ (28) ಅವರು ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
'ಮೋಹಾಲಿಯ ಸೆಕ್ಟರ್ 71 ಮನೆಯಲ್ಲಿ ಮಂಗಳವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.
'ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ತಿಳಿದು ಬಂದಿದ್ದು, ಆಕಷ್ಮಿಕವಾಗಿ ಗುಂಡು ಸಿಡಿದಿದೆಯಾ ಎಂಬುದನ್ನೂ ತನಿಖೆ ಮಾಡುತ್ತಿದ್ದು, ಮರಣೋತ್ತರ ಪರೀಕ್ಷೆಯ ನಂತರ ನಿಖರ ಮಾಹಿತಿ ದೊರೆಯಲಿದೆ' ಎಂದು ಮೋಹಾಲಿ ಡಿಎಸ್ಪಿ ಗುರ್ಶೇರ್ ಸಿಂಗ್ ಸಂಧು ಅವರು ತಿಳಿಸಿದ್ದಾರೆ.
PublicNext
14/09/2021 12:32 pm