ಕೊಡಗು: ಬುಲೆಟ್ ಬೈಕ್ ಹಾಗೂ ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸವಾರರು ಸಾವಿಗೀಡಾದ ಘಟನೆ ಜಿಲ್ಲೆಯ ಮಡಿಕೇರಿ ಹೊರ ವಲಯದ ಸಂಪಿಗೆ ಕಟ್ಟೆ ಬಳಿ ನಡೆದಿದೆ.
ಬೈಕ್ನಲ್ಲಿ ವಿವಾಹದ ಲಗ್ನ ಪತ್ರಿಕೆ ಸಿಕ್ಕಿದೆ. ಈ ಮೂಲಕ ಮೃತರು ಮೈಸೂರು ಮೂಲದವರು ಎಂದು ತಿಳಿದುಬಂದಿದೆ. ಲಗ್ನ ಪತ್ರಿಕೆ ಕೊಟ್ಟು ವಾಪಸ್ ಮೈಸೂರಿಗೆ ಬರುವಾಗ ಮಡಿಕೇರಿ ಸಮೀಪದಲ್ಲಿ ಟಿಪ್ಪರ್ ಬಂದು ಡಿಕ್ಕಿ ಹೊಡೆದಿದೆ. ಸ್ಥಳಕೆ ನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ದೇಹಗಳನ್ನು ಮಡಿಕೇರಿಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
PublicNext
07/09/2021 07:53 am