ಜೈಪುರ: ಕಾರು ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ದಂಪತಿ, ಮಗು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ರಾಜಸ್ಥಾನದ ಭರತಪುರ ಜಿಲ್ಲೆಯ ರೂಪಾಸ್ನಲ್ಲಿ ನಡೆದಿದೆ.
ಫತೇಪುರ್ ಸಿಕ್ರಿಯ ಬಂಡರೋನ್ಲಿ ನಿವಾಸಿ ಬಬ್ಲು ಕುಶ್ವಾಹ, ಪತ್ನಿ ಆರತಿ ಮತ್ತು ಮಗ ಕಾರ್ತಿಕ್ ಮೃತ ದುರ್ದೈವಿಗಳು. ರಕ್ಷಾ ಬಂಧನ ಆಚರಿಸಲು ಆರತಿ ತವರಿಗೆ ತೆರಳಿದ್ದಳು. ಅಲ್ಲಿಂದ ಪತಿ ಜೊತೆಗೆ ಬೈಕ್‌ನಲ್ಲಿ ಮಗುವಿನೊಂದಿಗೆ ಹಿಂದಿರುಗುವ ವೇಳೆ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ. ಅಷ್ಟೇ ಅಲ್ಲದೆ ಕಾರನ್ನು ಜಪ್ತಿ ಮಾಡಿ ತನಿಖೆ ಮುಂದುವರಿಸಿದ್ದಾರೆ.
PublicNext
22/08/2021 09:50 pm