ಮುಂಬೈ: ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ಶಿರಡಿಗೆ ತೆರಳುತ್ತಿದ್ದ ಮೂವರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ನಗರದ ಬಳಿ ನಡೆದಿದೆ.
ಮುಂಬೈನ ವಿಲೇ ಪಾರ್ಲೆ ನಿವಾಸಿಗಳಾದ ಸಿದ್ಧಾರ್ಥ್ ಭಲೇರಾವ್ (22), ವೈಜನಾಥ್ ಚವಾಣ್ (21) ಮತ್ತು ಆಶೀಶ್ ಪಟೋಲೆ (19) ಮೃತ ದುರ್ದೈವಿಗಳು. ವೇಗವಾಗಿ ಬಂದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಇನ್ನೋರ್ವ ಸವಾರ ಅನೀಶ್ ವಕ್ಲೆ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಅಂಬಾದ್ಲೀಪೊಸ್ ಪೊಲೀಸರು, ಆರೋಪಿ ಚಾಲಕನಿಗೆ ಬಲೆ ಬೀಸಿದ್ದಾರೆ.
PublicNext
04/01/2021 02:12 pm