ಬೆಂಗಳೂರು- ಬಾಡಿಗೆ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಬಾಡಿಗೆದಾರ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ಬೆಂಗಳೂರಿನ ಲಗ್ಗೆರೆಯಲ್ಲಿ ಈ ಘಟನೆ ನಡೆದಿದ್ದು ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪೂರ್ಣಿಮಾ ಎಂಬುವವರನ್ನು ಅಕ್ಕಪಕ್ಕದವರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪೂರ್ಣಿಮಾ ಅವರ ಮೇಲೆ ಮನೆ ಮಾಲೀಕಳೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪೂರ್ಣಿಮಾ ಕಳೆದ ನಾಲ್ಕು ತಿಂಗಳಿಂದ ಬಾಡಿಗೆ ನೀಡಿರಲಿಲ್ಲ ಎಂಬ ಕಾರಣಕ್ಕಾಗಿ ನಡೆದ ಜಗಳ ತಾರಕಕ್ಕೇರಿದೆ. ಮನೆ ಮಾಲೀಕಳಾದ ಮಹಾಲಕ್ಷ್ಮೀ, ಪೂರ್ಣಿಮಾ ಅವರಿಗೆ ಚಾಕುವಿನಿಂದ ಇರಿದಿದ್ದಾರೆ ಎಂಬ ಆರೋಪದ ಮೇಲೆ ಮಹಾಲಕ್ಷ್ಮೀ ಅವರನ್ನು ಬಂಧಿಸಲಾಗಿದೆ.
PublicNext
31/10/2020 07:55 pm