ಚಿತ್ರದುರ್ಗ: ದೆವ್ವ ಬಿಡಸ್ತೀನಿ ಬಾ ಎಂದು ಯುವತಿಯನ್ನು ಪೊದೆಯೊಳಗೆ ಕರೆದೊಯ್ದ ಯುವಕ ಆಕೆಯ ಬೆತ್ತಲೆ ವಿಡಿಯೋ ಮಾಡಿದ್ದಾನೆ. ಅದೇ ವಿಡಿಯೋವನ್ನು ದಾಳವಾಗಿಸಿ ಒತ್ತಾಯವಾಗಿ ಆಕೆಯನ್ನು ಮದುವೆಯಾಗಿದ್ದಾನೆ
ಹೀಗೆ ಒತ್ತಾಯದ ಮದುವೆ ಮೂಲಕ ಒಲ್ಲದ ಗಂಡನಾದ ಆ ಯುವಕ ಮಂತ್ರವಾದಿಯ ಮಗ. ಈ ಘಟನೆ ನಡೆದಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಭರಮಸಾಗರ ಎಂಬ ಗ್ರಾಮದಲ್ಲಿ. ಮಂತ್ರವಾದಿ ಶರಣಪ್ಪ ಹಾಗೂ ಆತನ ಮಗ ಭಾಸ್ಕರ್ ಇಬ್ಬರೂ ಸೇರಿ ಮಾಡಿದ ಕೃತ್ಯವಿದು.
19 ವರ್ಷದ ಯುವತಿಯೊಬ್ಬಳನ್ನು ದೆವ್ವ ಬಿಡಿಸೋದಾಗಿ ಹೇಳಿ ಜಾಲಿಗಿಡ ಇರುವ ಪೊದೆಗಳ ಬಳಿ ಕರೆದೊಯ್ದಿದ್ದಾರೆ. ಆಕೆಗೆ ಮತ್ತು ಬರುವ ಪಾನೀಯ ಕುಡಿಸಿ ಪ್ರಜ್ಞೆ ತಪ್ಪಿದ ನಂತರ ಬೆತ್ತಲೆ ವಿಡಿಯೋ ಮಾಡಿದ್ದಾರೆ.
ನಂತರ ನಾನು ಹೇಳಿದಂತೆ ಕೇಳಬೇಕು ಇಲ್ಲದಿದ್ರೆ ಈ ವಿಡಿಯೋವನ್ನು ಫೇಸ್ ಬುಕ್ ಗೆ ಹಾಕೋದಾಗಿ ಭಾಸ್ಕರ್ ಬೆದರಿಸಿದ್ದಾನೆ. ವಿಷಯ ತಿಳಿದ ಯುವತಿಯ ಕುಟುಬಂಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಪ್ರಳಯಾಂತಕ ತಂದೆ-ಮಗನನ್ನು ಬಂಧಿಸಿದ್ದಾರೆ.
PublicNext
31/10/2020 06:34 pm