ಅಹ್ಮದಾಬಾದ್- ಘಟವಾಣಿ ಗರ್ಭಿಣಿಯೊಬ್ಬಳು ತನ್ನ ಅತ್ತೆಯನ್ನೇ ರಾಡ್ ನಿಂದ ಹೊಡೆದು ಕೊಲೆ ಮಾಡಿದ ಘಟನೆ ಗುಜರಾತ್ ರಾಜ್ಯದ ಗೋಟಾ ಎಂಬಲ್ಲಿ ನಡೆದಿದೆ.
ಈ ಅಮಾನುಷ ಕೃತ್ಯ ಎಸಗಿದ ಗರ್ಭವತಿ 29 ವರ್ಷ ವಯಸ್ಸಿನ ನಿಖಿತಾ ಅಗರ್ವಾಲ್ ಈಗ ಅರೆಸ್ಟ್ ಆಗಿದ್ದಾಳೆ. ಕೊಲೆಗೈದ ಈಕೆ ತನ್ನ ಮಾವನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇದಕ್ಕೆ ವಿರೋಧಿಸಿದ ಕಾರಣ ಅತ್ತೆ ರೇಖಾ ಅಗರ್ವಾಲ್ ಅವರನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾಳೆ.
ಈ ವೇಳೆ ಮಗನಿಗೆ ಕರೆ ಮಾಡಿದ ರಸಿಕ ಮಾವ ಮನೆಯಲ್ಲಿ ದೊಡ್ದ ಜಗಳ ನಡೆಯುತ್ತಿದೆ ಎಂದಿದ್ದಾನೆ. ಕೂಡಲೇ ಮಗ ಮನೆಗೆ ಬಂದಾಗ ತನ್ನ ತಾಯಿಯ ಕೊಲೆಯಾಗಿರುವ ಸಂಗತಿ ತಿಳಿದಿದೆ.
ಅತ್ತೆಯನ್ನು ಕೊಲೆ ಮಾಡಿದ ಸೊಸೆ ಶವವನ್ನು ಮನೆಯಲ್ಲೇ ಸುಟ್ಟು ಹಾಕಿದ್ದಳು ಎಂಬ ಸಂಗತಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಕೊಲೆ ಆರೋಪಿ ನಿಖಿತಾ ಅಗರ್ವಾಲ್ ಈಗ ನಾಲ್ಕು ತಿಂಗಳ ಗರ್ಭವತಿಯಾಗಿದ್ದಾಳೆ.
PublicNext
31/10/2020 04:38 pm