ಬೆಂಗಳೂರು-ಸುತ್ತಾಡಲು ಕಾರೊಂದನ್ನು ಬಾಡಿಗೆ ಪಡೆದಿದ್ದ ಆಕೆ ಒಟ್ಟು ₹4 ಲಕ್ಷ ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲ. ನನಗೆ ಮಾಜಿ ಡಿಸಿಎಂ ಪರಮೇಶ್ವರ್ ಅಣ್ಣನ ಮಗಳು ಗೊತ್ತು ಎನ್ನುತ್ತಿದ್ದ ಆಕೆ ಸಾಲ ಕೊಡಿಸೋದಾಗಿ ಅನೇಕ ಯುವಕರಿಗೆ ಮೋಸ ಮಾಡಿದ್ದಾಳೆ ಎನ್ನಲಾಗಿದೆ. ಇಂತಹ ಪಕ್ಕಾ ಚಾಲಾಕಿ ಹುಡುಗಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ.
ನಗರದ ಜ್ಞಾನ ಗಂಗಾ ಲೇಔಟ್ ನಿವಾಸಿ 32 ವರ್ಷ ವಯಸ್ಸಿನ ಪಲ್ಲವಿ ಎಂಬಾಕೆಯೇ ಬಂಧಿತ ಆರೋಪಿ. ನಿರುದ್ಯೋಗಿಗಳ ಸ್ವಯಂ ಉದ್ಯೋಗಕ್ಕೆ ಸಾಲ ಕೊಡಿಸೋದಾಗಿ ಹೇಳಿ ಹತ್ತಾರು ಯುವಕರಿಂದ ಹಣ ಪಡೆದು ಈಕೆ ವಂಚಿಸಿದ್ದಳು. ಜೊತೆಗೆ ಕಾರೊಂದನ್ನು ಬಾಡಿಗೆ ಪಡೆದು ಬರೋಬ್ಬರಿ 40 ಸಾವಿರ ಕಿ.ಮೀ ಸುತ್ತಾಡಿದ್ದಾಳೆ. ಅದರ ₹4 ಲಕ್ಷ ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದಾಳೆ. ಕಾರಿನ ಚಾಲಕ ಯೋಗೀಶ್ ಬಾಡಿಗೆ ಹಣ ಕೊಡುವಂತೆ ಕೇಳಿದ್ದಾನೆ. ಆಗ ಈ ಕಿಲಾಡಿ ಹುಡುಗಿ ಆತನೊಂದಿಗೆ ಪ್ರೀತಿ ನಾಟಕ ಶುರು ಹಚ್ಚಿಕೊಂಡಿದ್ದಾಳೆ. ಇದಕ್ಕೆ ನಿರಾಕರಿಸಿದ ಯೋಗೇಶ್ ಮೇಲೆ ರೇಪ್ ಕೇಸ್ ಹಾಕೋದಾಗಿ ಬೆದರಿಕೆಯನ್ನೂ ಹಾಕಿದ್ದಾಳೆ.
ಈ ವಿಷಯ ತಿಳಿದ ಕಾರಿನ ಮಾಲೀಕ ಜನಾರ್ಧನ್ ಸದಾಶಿವ ನಗರದ ಜಿ ಪರಮೇಶ್ವರ್ ಮನೆಗೆ ಆಕೆಯನ್ನು ಕರೆದೊಯ್ಯುವಂತೆ ಯೋಗೇಶ್ ಗೆ ಸೂಚಿಸಿದ್ದಾರೆ. ಅಲ್ಲಿ ಹೋದ್ರೆ ಪರಮೇಶ್ವರ್ ಪತ್ನಿ, ಪಲ್ಲವಿ ಎಂಬ ಈಕೆ ಯಾರೆಂಬುದೇ ನನಗೆ ಗೊತ್ತಿಲ್ಲ. ಕೂಡಲೇ ದೂರು ನೀಡಿ ಎಂದಿದ್ದಾರೆ. ಆಗ ಈಕೆಯ ಅಸಲಿಯತ್ತು ಬಯಲಾಗಿದೆ.
ಈಗ ಪೊಲೀಸರ ಬಲೆಗೆ ಬಿದ್ದಿರುವ ಕಿಲಾಡಿ ಪಲ್ಲವಿ ತಾನು ಮಾಡಿದ್ದೆಲ್ಲವನ್ನೂ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ.
PublicNext
31/10/2020 01:13 pm