ಫ್ರಾನ್ಸ್ : ಚರ್ಚ್ ಮುಂದೆ ವ್ಯಕ್ತಿಯೊಬ್ಬ ಗುರುವಾರ ಚಾಕುವಿನಿಂದ ಅಲ್ಲಿದ್ದ ಮಹಿಳೆ ಮೇಲೆ ದಾಳಿ ಮಾಡಿ, ಶಿರಚ್ಛೇದ ಮಾಡಿದ್ದಾನೆ. ಇದೇ ವೇಳೆ ದಾಳಿ ತಡೆಯಲು ಬಂದ ಇಬ್ಬರ ಮೇಲೂ ಚೂರಿಯಿಂದ ದಾಳಿ ನಡೆಸಿದ್ದಾನೆ. ಇದರ ಪರಿಣಾಮ ಮೂವರೂ ಸಾವನ್ನಪ್ಪಿದ್ದಾರೆ.
ಫ್ರೆಂಚ್ ನಗರದ ನೈಸ್ ನ ಚರ್ಚ್ ನಲ್ಲಿ ಮಹಿಳೆಯನ್ನು ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ನೈಸ್ ನ ಮೇಯರ್ ಕ್ರಿಶ್ಚಿಯನ್ ಎಸ್ಟ್ರೊಸಿ ಅವರು ಈ ದಾಳಿಯ ಹಿಂದಿರುವ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರವಾದಿ ಮೊಹಮ್ಮದ್ ಪೈಗಂಬರರನ್ನು ನಿಂದಿಸಿದ್ದರು ಎಂಬ ಕಾರಣಕ್ಕೆ ಶಿಕ್ಷಕನೋರ್ವನ ಕತ್ತು ಕತ್ತರಿಸಿ ಹತ್ಯೆ ಮಾಡಲಾಗಿತ್ತು. ಇದಾದ ಬಳಿಕ ಫ್ರಾನ್ಸ ನಲ್ಲಿ ಪರಿಸ್ಥಿತಿ ಉದ್ವಿಗ್ನಕ್ಕೆ ತಿರುಗಿತ್ತು. ಫ್ರಾನ್ಸ್ ಅಧ್ಯಕ್ಷ ಇಮ್ಮಾನ್ಯುವೆಲ್ ಮಾಕ್ರೋನ್ ಅವರು ಪ್ರವಾದಿ ಮೊಹಮ್ಮದ್ ರ ವ್ಯಂಗ್ಯಚಿತ್ರ ಪ್ರದರ್ಶನ ನಿಲ್ಲಿಸುವುದಿಲ್ಲ ಎಂದು ದೇಶದ ಮುಂದೆ ಪ್ರತಿಜ್ಞೆ ಮಾಡಿದ್ದರು ಎನ್ನಲಾಗಿದೆ.
PublicNext
29/10/2020 06:40 pm