ಮನಿಲಾ(ಫಿಲಿಫೈನ್ಸ್)-ಕೋಳಿಯೊಂದು ಪೊಲೀಸ್ ಅಧಿಕಾರಿಯನ್ನು ಕೊಲ್ಲುವ ಮಟ್ಟಿಗೆ ಬಲಿಷ್ಟವಾ? ಸಾಧ್ಯವೇ ಇಲ್ಲ. ಆದ್ರೆ ಇಂತದ್ದೊಂದು ಘಟನೆ ನಡೆದಿದೆ. ಆದ್ರೆ ಆ ಪೊಲೀಸ್ ಅಧಿಕಾರಿಯ ಸಾವಿಗೆ ಕಾರಣವಾಗಿದ್ದು ಕೋಳಿ ಕಾಲಿಗೆ ಕಟ್ಟಲಾಗಿದ್ದ ಒಂದು ಬ್ಲೇಡ್.
ನಿನ್ನೆ ಸೋಮವಾರ ಫಿಲಿಫೈನ್ಸ್ ಉತ್ತರ ನಾರ್ಥರನ್ ಸಮರ್ ನಲ್ಲಿ ಕಾನೂನು ಬಾಹಿರ ಕೋಳಿ ಜಗಳ ಸ್ಪರ್ಧೆ ನಡೆದಿದೆ ಎಂಬ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿದ ಲೆಫ್ಟಿನೆಂಟ್ ಕ್ರಿಶ್ಚಿಯನ್ ಎಂಬ ಅಧಿಕಾರಿ ಸ್ಪರ್ಧೆಯನ್ನು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಕೋಳಿ ಕಾಲಿನಲ್ಲಿದ್ದ ಬ್ಲೇಡ್ ಅಧಿಕಾರಿಯ ತೊಡೆಯ ನಾಡಿಯಲ್ಲಿ ಸಿಲುಕಿದೆ. ಇದರಿಂದ ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಈ ದುರಂತಕ್ಕೆ ಕಾರಣರಾದ ಮೂವರನ್ನು ಬಂಧಿಸಲಾಗಿದೆ.
PublicNext
27/10/2020 07:08 pm