ಬಟ್ಟೆ ಇಡಬೇಕಾದ ಅಲ್ಮೇರಾದ ಜಾಗದಲ್ಲಿ ಈ ಭೂಪ ಕಂತೆ ಕಂತೆ ಹಣದ ಕಟ್ಟುಗಳನ್ನೇ ಇಟ್ಟಿದ್ದಾನೆ. ಆದ್ರೆ ಇದು ಹಾಗೋ ಹೀಗೋ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ.
ಒಬ್ಬ ಸಾಮಾನ್ಯ ಡಿಟಿಪಿ ಆಪರೇಟರ್ ಆಗಿರುವ ಸಂಜಯ್ ಜೈನ್ ಎಂಬಾತನ ಮನೆಯಲ್ಲಿ ಇಟ್ಟಿಗೆ ಜೋಡಿಸಿಟ್ಟಂತೆ ಹಣ ಜೋಡಿಸಿಡಲಾಗಿದೆ. ಜೊತೆಗೆ ಆತನ ಆಪ್ತರ ಒಟ್ಟು 42 ಮನೆಗಳಲ್ಲಿ ಇದೇ ರೀತಿ ಹಣ ಹಾಗೂ ಆಭರಣಗಳನ್ನು ಸಂಗ್ರಹಿಸಿಡಲಾಗಿದೆ ಎಂದು ಐಟಿ ಅಧಿಕಾರಿಗಳಿಗೆ ಗೊತ್ತಾಗಿದೆ.
ಈಗ ಸಂಜಯ್ ಜೈನ್ ಎಂಬಾತನ ಮನೆಯಲ್ಲಿ ಒಟ್ಟು 2 ಕೋಟಿ 37 ಲಕ್ಷ ನಗದು ಹಾಗೂ 2 ಕೋಟಿ 89 ಲಕ್ಷ ಬೆಲೆಯ ಆಭರಣಗಳು ಪತ್ತೆಯಾಗಿವೆ. ಇದೆಲ್ಲವೂ ಅಕ್ರಮ ಸಂಪತ್ತು ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.
PublicNext
27/10/2020 01:46 pm